Sat. Nov 16th, 2024

ಪುನೀತ್ ಕೆರೆಹಳ್ಳಿ ಹೇಳಿಕೆ ಬಗ್ಗೆ ಕ್ರಮಕ್ಕೆ ಕಮಿಷನರ್ ಗೆ ಮನವಿ

Share this with Friends

ಮೈಸೂರು: ಪುನೀತ್ ಕೆರೆಹಳ್ಳಿ ಅವಹೇಳನಕಾರಿ ಹೇಳಿಕೆ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನಗರ ಕಾಂಗ್ರೆಸ್ ವಕ್ತಾರ್ ರಾಜೇಶ್ ನೇತೃತ್ವದಲ್ಲಿ ಡಿಸಿಪಿ ಮುತ್ತುರಾಜ್ ಮುಖಾಂತರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಗೆ ದೂರು ನೀಡಲಾಯಿತು.

ಇತ್ತೀಚಿಗೆ ಸಾರ್ವಜನಿಕ ಸಭೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ನೀಡಿದ ಹೇಳಿಕೆಗೆ ಪುನೀತ್ ಕರೆಹಳ್ಳಿ ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ಹಾಗೂ ಅಲ್ಲಾಹು ಬಗ್ಗೆ ಅವಹೇಳನಕಾರಿ, ಮತ್ತು ದುರುದ್ದೇಶ ಪ್ರೇರಿತ ಹೇಳಿಕೆಗಳನ್ನು ಹಬ್ಬಿಸಿದ್ದು ಆತನ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ರಾಜೇಶ್ ನೇತೃತ್ವದ ನಿಯೋಗ ಮನವಿ ಪತ್ರ ಸಲ್ಲಿಸಿತು‌

ರಾಜ್ಯದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡುವುದು ಮತ್ತು ಜಾತಿ, ಧರ್ಮ ಅಥವಾ ಸಮುದಾಯದ ಆಧಾರದಲ್ಲಿ ಯಾರ ಮೇಲೂ ದ್ವೇಷವನ್ನು ಪ್ರಚೋದಿಸದಂತೆ ಜಾಗರೂಕತೆಯಿಂದ ನಡೆದುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ನಿಯೋಗದವರು ಹೇಳಿದರು.

ಪುನೀತ್ ಕೆರೆಹಳ್ಳಿ ಹೇಳಿಕೆ ಪ್ರಜಾಪ್ರಭುತ್ವದ ತತ್ವಕ್ಕೆ ವಿರುದ್ಧವಾಗಿದ್ದು, ನಾಗರಿಕ ಸಮಾಜದಲ್ಲಿ ಆಶಾಂತಿ ಹಾಗೂ ತೊಂದರೆ ಉಂಟುಮಾಡುವ ಪ್ರಯತ್ನವಾಗಿದೆ. ಪುನೀತ್ ಕೆರೆಹಳ್ಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಾಜೇಶ್ ಮನವಿ ಮಾಡಿದರು.

ನಿಯೋಗದಲ್ಲಿ ಕೃಷ್ಣರಾಜ ಕ್ಷೇತ್ರದ ಕಾಂಗ್ರೆಸ್ ಯುವ ಮುಖಂ ಹೊಯ್ಸಳ, ರಹೀಂ, ನೌಫತ್ ಅಹಮದ್, ಅಭ್ರಕ ಮಹಮದ್, ಕಲೀಂ ಶರೀಫ್ ,ವೀರ ಕುಸ್ತು, ಶೋಯಬ್ ಮೋಸೇಬ್, ನಯಾಜ್, ರೋಹಿತ್ ಸಿಂಗ್, ನಾಸಿಕ್, ಮೋಹನ್ ಕುಮಾರ್, ಕಮ್ರಾನ್ ಮತ್ತಿತರರು ಹಾಜರಿದ್ದರು.


Share this with Friends

Related Post