ಬೆಂಗಳೂರು ಕೆ.ಆರ್.ಮಾರುಕಟ್ಟೆ ಬಳಿ ಮಹಿಳೆಯ ಅತ್ಯಾಚಾರ; ಚಿನ್ನಾಭರಣ, ಹಣ ದೋಚಿದ ದುಷ್ಕರ್ಮಿಗಳು
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮಹಿಳೆ ಮೇಲೆ ಇಬ್ಬರು ಕಿರಾತಕರು ಅತ್ಯಾಚಾರ ಎಸಗಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಕೆಆರ್ ಮಾರುಕಟ್ಟೆ ಬಳಿ ಮಹಿಳೆ ಮೇಲೆ ಅತ್ಯಾಚಾರ ನಡೆಸಲಾಗಿದ್ದು, ಎಸ್.ಜೆ.ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬಸ್ ಗೆ ಕಾಯುತ್ತಿದ್ದ ಮಹಿಳೆಯ ಮೇಲೆ ಇಬ್ಬರು ದುಷ್ಕರ್ಮಿಗಳು ಅತ್ಯಾಚಾರ ಎಸಗಿ ಆಕೆಯ ಬಳಿ ಇದ್ದ ಮೊಬೈಲ್, ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ.
ಈ ಬಗ್ಗೆ 37 ವರ್ಷದ ಮಹಿಳೆ ಕೇಂದ್ರ ವಿಭಾಗದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಂತ್ರಸ್ತ ಮಹಿಳೆ ಯಲಹಂಕಕ್ಕೆ ತೆರಳಲು ಕೆ.ಆರ್. ಮಾರ್ಕೆಟ್ ಬಳಿ ಬಸ್ ಕಾಯುತ್ತಿದ್ದರು. ಈ ವೇಳೆ ಬಂದ ಇಬ್ಬರು ವ್ಯಕ್ತಿಗಳು ಮಹಿಳೆಗೆ ದಾರಿ ತೋರಿಸುವುದಾಗಿ ಕರೆದೊಯ್ದಿದ್ದಾರೆ.
ಬಳಿಕ ಗೋಡೌನ್ ಸ್ಟ್ರೀಟ್ ಬಳಿ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಮಾಡಿ, ನಂತರ ಬೆದರಿಸಿ ಮೊಬೈಲ್, ಹಣ, ಚಿನ್ನಾಭರಣ ದೋಚಿ ಪರಾರಿಯಾದರೆಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಎಸ್.ಜೆ.ಪಾರ್ಕ್ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.