Mon. Dec 23rd, 2024

ಮಳಿಗೆಗಳು ಧ್ವಂಸ: ಅಹೋರಾತ್ರಿ ಧರಣಿ ನಡೆಸಿದ ತೇಜಸ್ವಿ

Share this with Friends

ಮೈಸೂರು: ಮೈಸೂರಿನ ಅಗ್ರಹಾರ ವಾರ್ಡಿನ ಜೆಎಸ್‌ಎಸ್ ಆಸ್ಪತ್ರೆ ಬಳಿ ಸರ್ಕಾರಿ ಜಾಗದಲ್ಲಿ ಸುಮಾರು ೧೫ ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದ ೫ ಮಳಿಗೆ ಗಳನ್ನು ರೌಡಿಗಳ ಗುಂಪು ಏಕಏಕೀ ಧ್ವಂಸಗೊಳಿಸಿದ್ದು ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಈ ಘಟನೆಯನ್ನು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ತೀವ್ರವಾಗಿ ಖಂಡಿಸಿದ್ದು ರೌಡಿಗಳನ್ನು ಕೂಡಲೆ‌ ಬಂಧಿಸುವಂತೆ ಆಗ್ರಹಿಸಿದರು.

ಕೂಡಲೇ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿದ ತೇಜಸ್ವಿ ಮತ್ತಿತರ ಕನ್ನಡಪರ ಹೋರಾಟಗಾರರು ಈ ಜಾಗದ ವಿಷಯ ಈಗಾಗಲೇ ಅನೇಕ ವರ್ಷಗಳಿಂದ ಕೋರ್ಟ್ ನಲ್ಲಿದೆ, ಈ ಜಾಗದಲ್ಲಿ ವ್ಯಾಪಾರ ಮಾಡುತ್ತ ಬಡಜನರು ಜೀವನ ನಡೆಸುತ್ತಿದ್ದಾರೆ ಅಂತವರ‌ ಬದುಕನ್ನು ರೌಡಿಗಳು ಮೂರಾಬಟ್ಟೆ ಮಾಡಿದ್ದಾರೆ ಎಂದು ಕಿಡಿಕಾರುದರು.

ಈ ಜಾಗದ ಮೇಲೆ ಭೂಗಳ್ಳರ ಕಣ್ಣು ಬಿದ್ದಿದ್ದು ಜಾಗ ಕಬಳಿಸುವ ದೃಷ್ಟಿಯಿಂದ ರೌಡಿಗಳನ್ನು ಬಿಟ್ಟು ಈ ರೀತಿಯ ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಿ ತೇಜಸ್ವಿ ನಾಗಲಿಂಗಸ್ವಾಮಿ ಮತ್ತಿತರರು ಅಹೋರಾತ್ರಿ ಧರಣಿ ನಡೆಸಿದರು.

ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದರು.


Share this with Friends

Related Post