Mon. Dec 23rd, 2024

ರಾಮಕೃಷ್ಣ ಪರಮಹಂಸ ಪ್ರತಿಮೆ ಸ್ವಚ್ಛತಾ ಕಾರ್ಯ

Share this with Friends

ಮೈಸೂರು, ಆ.14: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಮಹನೀಯರ ಪ್ರತಿಮೆಗಳನ್ನು ಶುಚಿಗೊಳಿಸುವ ಕಾರ್ಯ ಹಮ್ಮಿಕೊಳ್ಳಲಾಯಿತು.

ಬಿಜೆಪಿ ದೇಶಾದ್ಯಂತ ಈ ಕಾರ್ಯಕ್ಕೆ ಕರೆ ನೀಡಿದ್ದು,ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲ ವ್ಯಾಪ್ತಿಯ ರಾಮಕೃಷ್ಣ ಪರಮಹಂಸ ಪ್ರತಿಮೆಯನ್ನು ಶುಚಿಗೊಳಿಸಿ ಮಾಲಾರ್ಪಣೆ ಮಾಡಲಾಯಿತು.

ಈ ಕಾರ್ಯದಲ್ಲಿ ಮಂಡಲದ ಅಧ್ಯಕ್ಷ ರಾಕೇಶ್ ಭಟ್, ಪ್ರಧಾನ ಕಾರ್ಯದರ್ಶಿಗಳಾದ ಈರೇಗೌಡ, ಆರ್. ಸೋಮಶೇಖರ್, ಉಪಾಧ್ಯಕ್ಷರಾದ ಎಚ್.ಜಿ ರಾಜಮಣಿ, ಬಿ.ಸಿ. ಶಶಿಕಾಂತ್, ಹಿರಿಯಣ್ಣ, ಕಾರ್ಯದರ್ಶಿ ತುಳಸಿ, ಮೋರ್ಚಾ ಮುಖಂಡರುಗಳಾದ ಚಂದ್ರಶೇಖರ್ ಸ್ವಾಮಿ ನಾಗರಾಜ್ ಜನ್ನು ಶುಭಶ್ರೀ, ಮಂಜುಳಾ, ಪುಟ್ಟಮಣಿ, ಗೋಪಾಲ್, ರಾಮಕೃಷ್ಣನಗರ ವಾರ್ಡ್ ಅಧ್ಯಕ್ಷರಾದ ಬಸವಣ್ಣ, ರಾಮಕೃಷ್ಣ ಪರಮಹಂಸ ಪ್ರತಿಷ್ಠಾನದ ಗೋಪಿನಾಥ್ ಹಾಗೂ ಸದಸ್ಯರು ಭಾಗವಹಿಸಿದ್ದರು.


Share this with Friends

Related Post