ಮೈಸೂರು: ಹಿಂದೂಗಳು, ಅಲ್ಪ ಸಂಖ್ಯಾತರಿಗೆ ಕಿರುಕುಳ ನೀಡುತ್ತಿರುವ ಬಾಂಗ್ಲಾದೇಶದ ವಿರುದ್ಧ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಮೈಸೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.
ಮೈಸೂರಿನ ಸಿದ್ದಾರ್ಥ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ವಿಶ್ವ ಹಿಂದೂ ಪರಿಷತ್ ಮೈಸೂರು ನಗರ ಜಿಲ್ಲಾ ಘಟಕ ವತಿಯಿಂದ ಬಾಂಗ್ಲಾದೇಶ ವಿರುದ್ಧ ಪ್ರತಿಭಟಿಸಿ ನಂತರ ಜಿಲ್ಲಾಧಿಕಾರಿಗಳ
ಮೂಲಕ ರಾಷ್ಟ್ರಪತಿಗಳಿಗೆ ಬಾಂಗ್ಲಾದೇಶದ ಹಿಂದುಗಳಿಗೆ ರಕ್ಷಣೆ ನೀಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಮಹೇಶ್ ಕಾಮತ್,
ಭಾರತದ ಹಿಂದೂಗಳು ಯಾವಾಗಲೂ ಶಾಂತಿ ಪ್ರೀಯರು ಮತ್ತು ಎಲ್ಲಾ ಧರ್ಮದ ಜನರ ಜೊತೆ ಹೊಂದಾಣಿಕೆಯಿಂದ ಬದುಕುವವರು ಎಂದು ಹೇಳಿದರು.
ಹಿಂದುಗಳು ಎಲ್ಲಾ ದರ್ಮೀಯರ ಜೊತೆ ಉತ್ತಮ ಸಾಮರಸ್ಯದ ಜೊತೆ ಶಾಂತಿಪ್ರಿಯರಾಗಿಯೇ ಇರಲು ಬಯಸುತ್ತಾರೆ,ಆದರೆ ಬಾಂಗ್ಲಾದೇಶದಲ್ಲಿ, ಇಸ್ಲಾಮಿಕ್ ಮೂಲಭೂತವಾದಿ ಜಿಹಾದಿ ಅಂಶಗಳಿಂದ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ಜಾತಿ,ಧರ್ಮ ನೋಡದೆ ಎಲ್ಲಾ ಜನರಿಗೆ ಉಚಿತ ಊಟ ಬಡಿಸುವ ಇಸ್ಕಾನ್ ಮೇಲೆ ತೆಗೆದುಕೊಂಡ ಕ್ರಮವನ್ನ ಮೈಸೂರು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸುತ್ತದೆ, ಈ ಕೂಡಲೇ ವಿಶ್ವ ಸಂಸ್ಥೆ ಮದ್ಯ ಪ್ರವೇಶಿಸಿ ಚಿನ್ಮಯ್ ಕೃಷ್ಣ ದಾಸ್ ಪ್ರಭು ಅವರನ್ನು ಬಿಡುಗಡೆ ಮಾಡಲು ಮತ್ತು ಹಿಂದುಗಳು, ದೇವಸ್ಥಾನದ ಭದ್ರತೆಗೆ ಸಹಕರಿಸಬೇಕೆಂದು ಕೆ.ಮಹೇಶ ಕಾಮತ್ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿಶ್ವಹಿಂದೂ ಪರಿಷತ್ ಉಪಾದ್ಯಕ್ಷರಾದ ಅಂಬಿಕಾ , ಕಾರ್ಯದರ್ಶಿ
ಮದು ಶಂಕರ , ಮಮತಾ ಜೀ, ಬಾಜಪ ರಾಷ್ಟ್ರೀಯ ಸದಸ್ಯರಾದ ಸವಿತಾ ಘಾಟ್ಕೆ,
ಗೋಪಾಲ ಜೀ , ಶಿವಕುಮಾರ, ವಿಜಯೇಂದ್ರ , ರಾದಾಕ್ರಷ್ಣ ಜೀ ಆರ್,ಎಸ್. ಜಯಶ್ರೀ, ಜಿ ಚೇತನ, ಮಂಜುನಾಥ ಮತ್ತು ಹಿಂದು ಪರ ಸಂಘಟಣೆಯ ಸದಸ್ಯರು ಪಾಲ್ಗೊಂಡಿದ್ದರು.