Sat. Apr 5th, 2025

ಅಬಕಾರಿ ಇಲಾಖೆಯಿಂದ 19,92,989 ರೂ. ಮದ್ಯ ವಶ :137 ಆರೋಪಿಗಳ ಬಂಧನ

Share this with Friends

ಚಾಮರಾಜನಗರ, ಏ.4 : ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ 19,92,989 ರೂ. ಮದ್ಯ ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ.

ಮಾರ್ಚ್ 16 ರಿಂದ ಏಪ್ರಿಲ್ 2ರವರೆಗೆ ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ವತಿಯಿಂದ ಅಕ್ರಮ ಮದ್ಯ ಚಟುವಟುಕೆಗಳನ್ನು ಪತ್ತೆ ಹಚ್ಚಿ ಅಬಕಾರಿ ಕಾನೂನಿನ್ವಯ ಒಟ್ಟು 163 ಮೊಕದ್ದಮೆಗಳನ್ನು ದಾಖಲಿಸಲಾಗಿದೆ.

430.920 ಲೀ. ಮದ್ಯ, 6.850 ಲೀ. ಬಿಯರ್ ಹಾಗೂ 17 ವಿವಿಧ ವಾಹನಗಳನ್ನು ಜಪ್ತಿ ಮಾಡಿ,137 ಆರೋಪಿಗಳನ್ನು ಬಂಧಿಸಲಾಗಿದೆ.

ಇವುಗಳ ಒಟ್ಟಾರೆ ಅಂದಾಜು ಮೌಲ್ಯ 19,92,989 ರೂ. ಗಳಾಗಿರುತ್ತದೆ ಎಂದು ಅಬಕಾರಿ ಡೆಪ್ಯುಟಿ ಕಮಿಷನರ್ ತಿಳಿಸಿದ್ದಾರೆ.


Share this with Friends

Related Post