Tue. Dec 24th, 2024

ದೇವರಾಜೇ ಗೌಡರಿಗೆ 14 ದಿನಗಳ ನ್ಯಾಯಾಂಗ ಬಂಧನ

Share this with Friends

ಹಾಸನ,ಮೇ.12: ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ವಕೀಲ ದೇವರಾಜೇ ಗೌಡರಿಗೆ ಜೆಎಂಎಫ್‌ಸಿ ನ್ಯಾಯಾಧೀಶ ಸಿದ್ದರಾಮ್.ಎಸ್ ಅವರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದಲ್ಲಿ ದೇವರಾಜೇಗೌಡ ಬ್ಯಾಗ್ ಸಮೇತ ಇನೋವ ಕಾರಿನಲ್ಲಿ ಎಸ್ಕೇಪ್ ಆಗಲು ಯತ್ನಿಸಿದ್ದರು,ಆದರೆ ಶುಕ್ರವಾರ ರಾತ್ರಿ ಹೊಳೆನರಸೀಪುರ ಪೊಲೀಸರ ಮಾಹಿತಿ ಮೇರೆಗೆ ಹಿರಿಯೂರು ಪೊಲೀಸರು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಗುಯಿಲಾಳ್ ಟೋಲ್ ಬಳಿ ದೇವರಾಜೇಗೌಡರನ್ನು ವಶಕ್ಕೆ ಪಡೆದಿದ್ದರು.

ಹಿರಿಯೂರು ಗ್ರಾಮಾಂತರ ಠಾಣೆ ಸಿಪಿಐ ಕಾಳಿಕೃಷ್ಣ ನೇತೃತ್ವದಲ್ಲಿ ದೇವರಾಜೇಗೌಡರನ್ನು ವಶಕ್ಕೆ ಪಡೆದಿದ್ದರು, ಬಳಿಕ ಎಸ್‌ಐ ಅರುಣ್ ನೇತೃತ್ವದಲ್ಲಿ ಹಾಸನ ಪೊಲೀಸರು ದೇವರಾಜೇಗೌಡರನ್ನು ಹೊಳೆನರಸೀಪುರಕ್ಕೆ ಕರೆದೊಯ್ದಿದ್ದರು.

ಅರಕಲಗೂಡು, ಹಳ್ಳಿಮೈಸೂರು ಹಾಗೂ ಬಾಣಾವರ ಪಿಎಸ್‌ಐಗಳು ದೇವರಾಜೇಗೌಡರನ್ನು ಕರೆತಂದು ಹೊಳೆನರಸೀಪುರದ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಇರಿಸಿದ್ದರು.

ಸತತ ವಿಚಾರಣೆಯ ಬಳಿಕ ಪೊಲೀಸ್ ಅಧಿಕಾರಿಗಳು ಮೆಡಿಕಲ್‌ ಟೆಸ್ಟ್‌ಗೆ ಕರೆದೊಯ್ದು ವೈದ್ಯರ ತಪಾಸಣೆ ನಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.

ದೇವರಾಜೇಗೌಡರ ಕಾರು ಚಾಲಕನನ್ನು ಕರೆದೊಯ್ದು ಪೊಲೀಸರು ಕಾರು ತಪಾಸಣೆ ನಡೆಸಿದ್ದಾರೆ. ಹೊಳೆನರಸೀಪುರ ನಗರ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಅಜಯ್‌ಕುಮಾರ್ ಅವರು ಕಾರಿನಲ್ಲಿದ್ದ ಬ್ಯಾಗ್‌ಗಳನ್ನು ಪರಿಶೀಲನೆ ನಡೆಸಿ, ಕಾರಿನಲ್ಲಿದ್ದ ಮೊಬೈಲ್‌ ಹಾಗೂ ಬ್ಯಾಗ್ ಮತ್ತು ಕಾರನ್ನು ವಶಪಡಿಸಿಕೊಂಡಿದ್ದಾರೆ.


Share this with Friends

Related Post