ಮೈಸೂರು,ಮೇ.28: ಶೇರು ವಹಿವಾಟಿನಲ್ಲಿ ಲಕ್ಷಾಂತರ ಲಾಭ ಬಂದಿದೆ ಎಂದು ನಂಬಿಸಿ ವೃದ್ದರೊಬ್ಬರಿಗೆ 21,74,773 ರೂ ವಂಚನೆ ಮಾಡಿರುವ ಪ್ರಕರಣ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಜೆಪಿ ನಗರ ನಿವಾಸಿ ವೆಂಕಟೇಶ್ ಎಂಬುವರು ವಂಚನೆಗೆ ಒಳಗಾಗಿದ್ದಾರೆ. ವಾಟ್ಸ್ ಅಪ್ ಗ್ರೂಪ್ ಒಂದರಲ್ಲಿ ಜಾಯಿನ್ ಆದ ವೆಂಕಟೇಶ್ ವಂಚಕರು ನೀಡಿದ ಸಲಹೆ ಮೇರೆಗೆ ಹಂತ ಹಂತವಾಗಿ ಲಕ್ಷಾಂತರ ಹಣವನ್ನು ತಮ್ಮ ಖಾತೆಯಿಂದ ವರ್ಗಾವಣೆ ಮಾಡಿದ್ದಾರೆ.
ಲಾಭದ ಹಣವನ್ನ ವಿತ್ ಡ್ರಾ ಮಾಡಲು ಮುಂದಾದಾಗ ಶೇ.30 ರಷ್ಟು ಕಮೀಷನ್ ಕೇಳಿದ್ದಾರೆ,ಆಗಲೂ 3 ಲಕ್ಷ ಹಣವನ್ನ ಕಮೀಷನ್ ನೀಡಿದ್ದಾರೆ.
ಪ್ರಾಫಿಟ್ ಹಣ ಡ್ರಾ ಮಾಡಲು ಯತ್ನಿಸಿದಾಗ ಮತ್ತೆ ಎರಡು ಲಕ್ಷ ಕೇಳಿದ್ದಾರೆ.ಆಗ ತಾವು ವಂಚನೆಗೆ ಒಳಗಾಗಿರುವುದು ಖಚಿತವಾಗಿದೆ.
ಹೀಗೆ ಒಟ್ಟು 21,74,773 ರೂ ಕಳೆದುಕೊಂಡಿರುವ ವೆಂಕಟೇಶ್ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.