Mon. Dec 23rd, 2024

ಅಪ್ರಾಪ್ತ ತಮ್ಮನಿಗೆ ಬೈಕ್ ನೀಡಿದ ಸಹೋದರನಿಗೆ 25,000 ರೂ. ದಂಡ 

Share this with Friends

ಬಾಗಲಕೋಟೆ,ಫೆ.27: ಇತ್ತೀಚಿನ ವರ್ಷಗಳಲ್ಲಿ ಚಿಕ್ಕ ಹುಡುಗರು ದ್ವಿಚಕ್ರ ವಾಹನ ಓಡಿಸುವ ಖಯಾಲಿ ಹೆಚ್ಚಾಗಿಬಿಟ್ಟಿದೆ.

ಇದರಿಂದಾಗಿ ಬಹಳಷ್ಟು ಅವಗಳು ನಡೆದ ಉದಾಹರಣೆಗಳಿವೆ,ಕೆಲವೊಮ್ಮೆ ಸಾವು,ನೋವುಗಳೂ ಆಗಿವೆ,ಆದರೂ ನಮ್ಮ ಜನ ಎಚ್ಚೆತ್ತುಕೊಳ್ಳುವುದೇ ಇಲ್ಲ.

ಇದನ್ನು ತೆಗಟ್ಟಲು ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ, ಆದರೆ ಹೀಗೆ ಅಪ್ರಾಪ್ತ ಬಾಲಕ ವಾಹನ ಓಡಿಸಲು ಬೈಕ್ ನೀಡಿದ್ದಕ್ಕೆ ನ್ಯಾಯಾಲಯವೇ ದಂಡ ವಿಧಿಸಿರುವುದು ನಿಜಕ್ಕೂ ಅತ್ಯಂತ ಒಳ್ಳೆಯ ಬೆಳವಣಿಗೆ.

ಬಾಗಲಕೋಟೆ ಜಿಲ್ಲೆ ಜಮಖಂಡಿ ಜೆ.ಎಂ.ಎಫ್.ಸಿ ನ್ಯಾಯಾಲಯ
ಅಪ್ರಾಪ್ತ ತಮ್ಮನಿಗೆ ಬೈಕ್ ನೀಡಿದ ಅಣ್ಣನಿಗೆ 25,000 ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.

ಜಮಖಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಮಖಂಡಿ ಜೆ.ಎಂ.ಎಫ್.ಸಿ. ನ್ಯಾಯಾಲಯ 25 ಸಾವಿರ ರೂ. ದಂಡ‌ವಿಧಿಸಿ ಚುರುಕು ಮುಟ್ಟಿಸಿದ್ದು,ಇದರಿಂದ ಇನ್ನಾದರೂ ಇತರರು ಎಚ್ಚೆತ್ತುಕೊಳ್ಳುವಂತಾಗಲಿ.


Share this with Friends

Related Post