Fri. Dec 27th, 2024

ಬ್ಯಾಂಕ್ ಆಫ್ ಬರೋಡಾ ಗೆ 49.99 ಲಕ್ಷ ವಂಚನೆ: ದಂಪತಿ ವಿರುದ್ದ ದೂರು ದಾಖಲು

Share this with Friends

ಮೈಸೂರು,ಮಾ.18: ಒಂದೇ ಆಸ್ತಿಯನ್ನ ಎರಡು ಬ್ಯಾಂಕ್ ಗಳಲ್ಲಿ ಅಡಮಾನವಿಟ್ಟು ಬ್ಯಾಂಕ್ ಅಧಿಕಾರಿಗಳನ್ನೇ ಕತರ್ನಾಕ್ ದಂಪತಿ ಯಾಮಾರಿಸಿದ ಪ್ರಸಂಗ ನಡೆದಿದೆ.

ಬ್ಯಾಂಕ್ ಆಫ್ ಬರೋಡಾ
ಸರಸ್ವತಿಪುರಂ ಬ್ರಾಂಚ್ ನಲ್ಲಿ 49.99 ಲಕ್ಷ ಸಾಲ ಪಡೆದು ಅದೇ ದಾಖಲಾತಿಯನ್ನ ತಿದ್ದುಪಡಿ ಮಾಡಿ ಬೆಂಗಳೂರಿನ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ನಲ್ಲೂ ಸಾಲ ಪಡೆದು
ದಂಪತಿ ವಂಚಿಸಿದ್ದಾರೆ.

ಮೈಸೂರಿನ ಜೆಪಿ ನಗರ ನಿವಾಸಿಗಳಾದ ನಿರಂಜನ್ ಹಾಗೂ ನಂದಿನಿ ದಂಪತಿ ವಿರುದ್ದ ವಂಚನೆ ಪ್ರಕರಣ ದಾಖಲಾಗಿದೆ.

ನಿರಂಜನ್ ಹಾಗೂ ನಂದಿನಿ ಆಸ್ತಿಯ ಮೂಲ ದಾಖಲಾತಿಗಳನ್ನ ಸರಸ್ವತಿಪುರಂ ಬ್ರಾಂಚ್ ನ ಬ್ಯಾಂಕ್ ಆಫ್ ಬರೋಡದಲ್ಲಿ ಅಡಮಾನವಿಟ್ಟು 2016 ರಲ್ಲಿ 49.99 ಲಕ್ಷ ಸಾಲ ಪಡೆದಿದ್ದಾರೆ.

ಸಾಲ ಪಡೆದು 8 ವರ್ಷಗಳಾದರೂ ಹಣ ಮರುಪಾವತಿಸಿಲ್ಲ.ಸಾಲದ ಹಣ ಬಡ್ಡಿ ಸೇರಿ 79,71,306 ರೂ ಪಾವತಿಸಬೇಕಿದೆ.

ಈ ಮಧ್ಯೆ ಬೆಂಗಳೂರಿನ ಬನಶಂಕರಿ ಬಡಾವಣೆಯಲ್ಲಿರುವ ಸುರಭಿ ಸೌಹಾರ್ಧ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ನಲ್ಲೂ ಸಹ ಇದೇ ದಾಖಲಾತಿಗಳನ್ನ ತಿದ್ದುಪಡಿ ಮಾಡಿ ಸಾಲ ಪಡೆದಿರುವುದು ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕರ ಗಮನಕ್ಕೆ ಬಂದಿದೆ.

ಅಲ್ಲದೆ ಈ ಬಗ್ಗೆ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ನವರೂ ಸಹ ಪತ್ರ ವ್ಯವಹಾರ ಮಾಡಿ ದಂಪತಿಯ ವಂಚನೆಯನ್ನ ಬಯಲಿಗೆ ತಂದಿದ್ದಾರೆ.

ಹಾಗಾಗಿ ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕರಾದ ಎಂ.ಯೋಗೇಶ್ ಅವರು ಈ ದಂಪತಿ ವಿರುದ್ದ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ.


Share this with Friends

Related Post