Thu. Dec 26th, 2024

ಕೋಲಾರದಲ್ಲಿ ಮಾ.10ರಂದು 5k ಮ್ಯಾರಥಾನ್

Share this with Friends

ಕೋಲಾರ,ಮಾ.8: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸುವರ್ಣ ಮಹೋತ್ಸವದ ಅಂಗವಾಗಿ 5k ಮ್ಯಾರಥಾನ್ ಓಟ ಹಮ್ಮಿಕೊಳ್ಳಲಾಗಿದೆ

ಕೋಲಾರ ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಳ್ಳಲಾಗಿರುವ 5k ಮ್ಯಾರಥಾನ್ ನಲ್ಲಿ ಭಾಗವಹಿಸಲು ಇಚ್ಚಿಸುವ ಆಸಕ್ತರು ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಕೋಲಾರದ ಪೊಲೀಸ್ ಕವಾಯತು ಮೈದಾನದಲ್ಲಿ ಮಾರ್ಚ್ 10ರಂದು ಬೆಳಿಗ್ಗೆ 6.30ಕ್ಕೆ ಮ್ಯಾರಥಾನ್ ಪ್ರಾರಂಭವಾಗಲಿದೆ.

ಪೊಲೀಸ್ ಅಧೀಕ್ಷಕ ನಾರಾಯಣ ಅವರು ಈ 5000 ಮ್ಯಾರಥಾನ್ ಓಟದಲ್ಲಿ ಭಾಗವಹಿಸಲು ಸಮಸ್ತ ಸರ್ಕಾರಿ ನೌಕರರಿಗೆ ಕರೆ ನೀಡಿದ್ದು ಎಲ್ಲರು ತಪ್ಪದೇ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕೋಲಾರ‌ ಜಿಲ್ಲಾ‌ ಪೊಲೀಸರು ಕೋರಿದ್ದಾರೆ.

ಹೆಚ್ಚಿನ ವಿವರಗಳಿಗೆ ಮೊಬೈಲ್ ನಂಬರ್ 9480802600 ಸಂಪರ್ಕಿಸಬಹುದಾಗಿದೆ.


Share this with Friends

Related Post