Tue. Dec 24th, 2024

ಫೆ. 24ರಂದು ಜೆಎಸ್ಎಸ್ ವಿಜ್ಞಾನ- ತಂತ್ರಜ್ಞಾನ ವಿವಿ 6ನೇ ಘಟಿಕೋತ್ಸವ

Share this with Friends

ಮೈಸೂರು, ಫೆ.20: ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ 6ನೇ ಘಟಿಕೋತ್ಸವ ಫೆ. 24ರಂದು ನಡೆಯಲಿದೆ ಎಂದು ಉಪಕುಲಪತಿ ಸಂತೋಷ್ ಕುಮಾರ್ ತಿಳಿಸಿದರು.

ಕಾಲೇಜಿನಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಫೆ. 24ರ ಮಧ್ಯಾಹ್ನ 3.30ಕ್ಕೆ ಪ್ರಾರಂಭವಾಗುವ ಘಟಿಕೋತ್ಸವದಲ್ಲಿ 1067 ಬಿಎ, 47 ಬಿಸಿಎ, 120 ಎಮ್ ಟೆಕ್,117 ಎಂಸಿ, 51 ಎಂಎಸ್‌ಸಿ, 256 ಎಂಬಿಎ ಮತ್ತು 9 ಪಿ ಹೆಚ್ ಡಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗಯವುದು ಎಂದು ತಿಳಿಸಿದರು.

ವಿವಿಧ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಪಡೆದ 32 ವಿದ್ಯಾರ್ಥಿಗಳು ಸೇರಿದಂತೆ 63 ವಿದ್ಯಾರ್ಥಿಗಳಿಗೆ ಪದಕಗಳನ್ನು ನೀಡಲಾಗುವುದು ಎಂದು ಹೇಳಿದರು.

ಜಗದ್ಗುರು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಮತ್ತು ಪದಕಗಳನ್ನು ಪ್ರದಾನ ಮಾಡಲಾಗುವುದು, ಎಐಸಿಟಿಇ ಅಧ್ಯಕ್ಷ ಡಿ.ಜೆ ಸೀತಾರಾಮ್ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಸಂತೋಷ್ ಕುಮಾರ್ ತಿಳಿಸಿದರು.

ಜೆಎಸ್ಎಸ್ ವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಬೆಟ್ ಸೂರ್ ಮಠ್, ಡಾ. ಬಿ. ಸುರೇಶ್, ಡಾ. ಸಂತೋಷ್ ಕುಮಾರ್, ಪಿ ನಂಜುಂಡಸ್ವಾಮಿ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.


Share this with Friends

Related Post