Sat. Nov 2nd, 2024

ಮುಂಬೈ ಕ್ರೈಂ ಬ್ರಾಂಚ್ ಪೊಲೀಸರ ಹೆಸರಲ್ಲಿ ವ್ಯಕ್ತಿಗೆ 7 ಲಕ್ಷ ರೂ ವಂಚನೆ

Share this with Friends

ಮೈಸೂರು,ಜೂ.9: ಮುಂಬೈ ಕ್ರೈಂ ಬ್ರಾಂಚ್ ಪೊಲೀಸರ ವಿಚಾರಣೆ ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ 7 ಲಕ್ಷ ರೂ ವಂಚಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ವಿಶ್ವೇಶ್ವರ ನಗರದ ಸ್ಯಾಮ್ಸನ್ ರಾಕೇಶ್ ಜೋಸೆಫ್ ಎಂಬುವರು ವಂಚನೆಗೆ ಒಳಗಾಗಿದ್ದಾರೆ.

ಫೆಡ್ ಎಕ್ಸ್ ಟ್ರಾನ್ಸ್ ಪೋರ್ಟ್ ಎಂದು ಹೇಳಿದ ವಂಚಕ ನಿಮ್ಮ ಹೆಸರಿನಲ್ಲಿ ಮುಂಬೈನಿಂದ ಇರಾನ್ ಗೆ 650 ಗ್ರಾಂ ಎಂಡಿಎಂಎ ಸಾಗಣೆ ಆಗಿದೆ,ಈ ಕುರಿತು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ವಿಚಾರಣೆ ನಡೆಸುತ್ತಾರೆ ಎಂದು ಜೋಸೆಫ್‌ ಅವರಿಗೆ ಬೆದರಿಸಿದ್ದಾನೆ.

ಸ್ಕೈಪ್ ಮೂಲಕ ಸಂಪರ್ಕ ಪಡೆದ ನಕಲಿ ಅಧಿಕಾರಿಗಳು ನಿಮ್ಮ ಬ್ಯಾಂಕ್ ಖಾತೆ ಹಾಗೂ ಹೆಸರನ್ನ ಮನಿಲಾಂಡರಿಂಗ್ ಗೆ ಬಳಕೆಯಾಗಿದೆ ನಿಮ್ಮ ಖಾತೆ ಪರಿಶೀಲನೆ ಮಾಡಬೇಕೆಂದು ತಿಳಿಸಿದ್ದಾರೆ ಎಂದು ನಂಬಿಸಿದ್ದಾನೆ.

ವಂಚಕನ ಮಾತನ್ನ ನಂಬಿದ ಜೋಸೆಫ್ ಸಾಕಷ್ಟು ಮಾಹಿತಿ ನೀಡಿದ್ದಾರೆ.ನಂತರ ಐಸಿಐಸಿಐ ಆಪ್ ತೆರೆದು ಲೋನ್ ಕ್ಲೇಮಿಂಗ್ ಪೇಜ್ ಓಪನ್ ಮಾಡಿ 7,00,561 ರೂ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ.

ವಂಚನೆಗೆ ಒಳಗಾಗಿರುವುದು ಗೊತ್ತಾಗುತ್ತಲೇ ಜೋಸೆಫ್ ಅವರು ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


Share this with Friends

Related Post