Tue. Dec 24th, 2024

ಹಾರೋಹಳ್ಳಿ ಚೆಕ್ ಪೋಸ್ಟ್ ನಲ್ಲಿ 9.53 ಲಕ್ಷ ವಶ

Share this with Friends

ಮೈಸೂರು,ಏ.3: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಾರೋಹಳ್ಳಿ ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದ 9,53,100 ರೂ ವಶಕ್ಕೆ ಪಡೆಯಲಾಗಿದೆ.

ಮೈಸೂರು ಕೊಡಗು ಲೋಕಸಭಾ ಚುನಾವಣೆ ಸಂಬಂಧ ಚೆಕ್ ಪೋಸ್ಟ್ ಗಳಲ್ಲಿ ನಡೆಯುತ್ತಿರುವ ತಪಾಸಣೆ ವೇಳೆ ಹಣ ವಶಕ್ಕೆ ಪಡೆಯಲಾಗಿದೆ.

ಎಚ್ ಡಿ ಕೋಟೆ ಮಾರ್ಗದಿಂದ ಮೈಸೂರು ಮಾರ್ಗವಾಗಿ ತೆರಳುತ್ತಿದ್ದ ಟಾಟಾ 510 ವಾಹನದಲ್ಲಿ ಹಣ ಸಾಗಿಸುತ್ತಿದ್ದ ವೇಳೆ ಎಸ್.ಎಸ್.ಟಿ.ತಂಡ 9,53,100 ಲಕ್ಷ ರೂಗಳನ್ನು ಜಪ್ತಿ ಮಾಡಿದೆ.

ಈ ಹಣವನ್ನು ಸಹಾಯಕ ಚುನಾವಣಾ ಅಧಿಕಾರಿಗಳು ಮತ್ತು ತಹಸೀಲ್ದಾರ್‌ ನಿರ್ದೇಶನದಂತೆ ಜಿಲ್ಲಾ ಖಜಾನೆಯ ಭದ್ರತಾ ಕೊಠಡಿಗೆ ರವಾನಿಸಲಾಗಿದೆ.


Share this with Friends

Related Post