Fri. Mar 6th, 2026

ಮುಂಗಾರು ಆರಂಭಕ್ಕೂ ಮೊದಲೇ ತುಂಗಭದ್ರಾ ಜಲಾಶಯಕ್ಕೆ ಹೊಸ ಕ್ರಸ್ಟ್ ಗೇಟ್ : ಡಿಕೆ ಶಿವಕುಮಾರ್

Share this with Friends

ಬೆಳಗಾವಿ:ತುಂಗಭದ್ರಾ ಅಣೆಕಟ್ಟೆಯ ಎಲ್ಲಾ 33 ಗೇಟುಗಳ ಬದಲಾವಣೆ ಕಾಮಗಾರಿ ಪ್ರಗತಿಯಲ್ಲಿದ್ದು 2026 ರ ಮುಂಗಾರು ಆರಂಭಕ್ಕೂ ಮೊದಲೇ ಹೊಸ ಗೇಟ್ ಗಳ ಅಳವಡಿಕೆ ಕಾರ್ಯ ಮುಗಿಯಲಿದೆ ಹಾಗಾಗಿ ಮುಂದಿನ ವರ್ಷ ಜಲಾಶಯದಲ್ಲಿ ನೀರು ಸಂಗ್ರಹಿಸಲು ಯಾವುದೇ ಸಮಸ್ಯೆ ಆಗಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್

ವಿಧಾನ ಪರಿಷತ್ ನಲ್ಲಿ  ಶಾಸಕ ಬಸನಗೌಡ ಬಾದರ್ಲಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ತುಂಗಭದ್ರಾ ಅಣೆಕಟ್ಟೆಯ ಎಲ್ಲಾ 33 ಗೇಟುಗಳ ಬದಲಾವಣೆ ಕಾಮಗಾರಿಯನ್ನು ತುಂಗಭದ್ರಾ ಮಂಡಳಿಯಿಂದ ಕೈಗೆತ್ತಿಕೊಳ್ಳಲಾಗಿದ್ದು, ರಾಜ್ಯ ಸರ್ಕಾರದಿಂದ ಮುಂಗಡವಾಗಿ ರೂ. 10 ಕೋಟಿ ಅನುದಾನವನ್ನು ಮಂಡಳಿಗೆ ಒದಗಿಸಲಾಗಿದೆ. ತುಂಗಭದ್ರಾ ಅಣೆಕಟ್ಟಿನ Design &  Drawingಗಳನ್ನು ಮುಖ್ಯ ಎಂಜಿನಿಯರ್, Central Design Organisation, ವಿಜಯವಾಡ, ಆಂಧ್ರ ಪ್ರದೇಶ ಇವರು , ಪರಿಶೀಲಿಸಿದ್ದು, Gates Design (NW & S) Directorate, CWC, New Delhi 2 ಅವರು  ದೃಡೀಕರಿಸುತ್ತಾರೆ. ತುಂಗಭದ್ರಾ ಮಂಡಳಿಯು ಗೇಟ್ ನಂ.19ಕ್ಕೆ ಹೊಸ ಗೇಟನ್ನು ಅಳವಡಿಸುವಿಕೆ ಕಾಮಗಾರಿಯನ್ನು ರೂ.1.66 ಕೋಟಿ ಮೊತ್ತಕ್ಕೆ,  ಹಾಗೂ ಬಾಕಿ 32 ಗೇಟುಗಳನ್ನು ಬದಲಾಯಿಸುವ ಕಾಮಗಾರಿಯನ್ನು  ರೂ.34.48  ಕೋಟಿ ಮೊತ್ತಕ್ಕೆ  M/s Hardware Tools & Machinary Projects Pvt. Ltd, Ahmedabad ಇವರಿಗೆ ವಹಿಸಿರುತ್ತದೆ ಎಂದರು.

ಪ್ರಸ್ತುತ  ಗೇಟ್ ಸಂಖ್ಯೆ 19 ಮತ್ತು ಉಳಿದ 32 ಗೇಟ್‌ಗಳ ಪೈಕಿ ಈವರೆಗೆ 14 ಗೇಟ್‌ಗಳ fabrication ಪೂರ್ಣಗೊಂಡಿದ್ದು,  ಗೇಟುಗಳ dismantling ಕಾರ್ಯ ಪ್ರಾರಂಭಿಸಲಾಗಿದೆ. ಡಿಸೆಂಬರ್-2025ರ ಅಂತ್ಯದಲ್ಲಿ ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹಣೆ ಮಟ್ಟ 1613 ಅಡಿಗೆ ಬಂದ ನಂತರ  ಜಲಾಶಯಕ್ಕೆ  ಹೊಸ ಕ್ರಸ್ಟ್ ಗೇಟುಗಳ ಅಳವಡಿಕೆ ಪ್ರಾರಂಭಿಸಲು ಹಾಗೂ ಜೂನ್-2026ರೊಳಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.


Share this with Friends

Related Post