Sat. Mar 7th, 2026

ಉತ್ತರ ಕರ್ನಾಟಕದ ಅಸಮತೋಲನ ನಿವಾರಣೆಗೆ ಪ್ರೊ.ಆರ್.ಗೋವಿಂದರಾವ್ ಶಿಫಾರಸ್ಸು ಜಾರಿ: ಸಿಎಂ

Share this with Friends

ಬೆಳಗಾವಿ:ಉತ್ತರ ಕರ್ನಾಟಕದ ಅಸಮತೋಲನ ನಿವಾರಣೆಗೆ ಪ್ರೊ.ಆರ್.ಗೋವಿಂದರಾವ್ ಶಿಫಾರಸ್ಸುಗಳನ್ನು ಜಾರಿಗೆ ತರಲಾಗುವುದು,ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ರೀತಿ ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆ ಬೇಡಿಕೆ ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತ ಚರ್ಚೆಗೆ ಉತ್ತರಿಸಿದ ಅವರು, ಪ್ರೊ.ಆರ್.ಗೋವಿಂದರಾವ್ ಅವರು ನವೆಂಬರ್ ಕೊನೆಯವರೆಗೂ ಅಧಿಕಾರವಿತ್ತು. ಅವರು ಇನ್ನೂ ಎರಡು ತಿಂಗಳು ಅಗತ್ಯವಿದೆ ಎಂದು ತಿಳಿಸಿದ ಮೇರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ.   ಬಹುತೇಕ ಜನವರಿಯಲ್ಲಿ ವರದಿಯನ್ನು ಕೊಡುತ್ತಾರೆ. ಉತ್ತರ ಕರ್ನಾಟಕದ ಅಸಮತೋಲನ ನಿವಾರಣೆಗೆ ವರದಿಯನ್ನು ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಕಿತ್ತೂರು ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕ ಅಭಿವೃದ್ಧಿಗೆ 500 ಕೋಟಿ ಒದಗಿಸಬೇಕೆಂದು ಮನವಿ ಮಾಡಿದ್ದಾರೆ. ಪ್ರೊ.ಗೋವಿಂದರಾವ್ ವರದಿ ಬಂದ ನಂತರ ಮಾಡಲಾಗುವುದು ಎಂದು ತಿಳಿಸಲಾಗಿದೆ. ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿಯೇ ಪ್ರೊ.ಗೋವಿಂದರಾವ್ ಸಮಿತಿ ರಚಿಸಲಾಗಿದೆ. ರಾಷ್ಟ್ರೀಯ 14 ನೇ ಹಣಕಾಸು ಸಮಿತಿಯ ಸದಸ್ಯರಾಗಿದ್ದರು. ಬಹುತೇಕ ಜನವರಿ 2026ನಲ್ಲಿ ವರದಿ ಬರಲಿದೆ. ಗೋವಿಂದರಾವ್ ಅವರು ಉತ್ತರ ಕರ್ನಾಟಕದ ಆರ್ಥಿಕ ತಜ್ಞರು. ವರದಿ ಪರಿಶೀಲಿಸಿ ಶಿಫಾರಸ್ಸುಗಳನ್ನು ಜಾರಿಗೆ ತರಲಾಗುವುದು ಎಂದರು.

ಉತ್ತರ ಕರ್ನಾಟಕದ ಅಭಿವೃದ್ಧಿಗೆ  300  ಕೆಪಿಎಸ್ ಶಾಲೆಗಳು:

1800 ಕೋಟಿ ಈ ವರ್ಷ ವೆಚ್ಚವಾಗಿದೆ ಈ ವರ್ಷ 5000 ಕೋಟಿ ವೆಚ್ಚವಾಗಲೇಬೇಕು ಎಂದು ಸೂಚಿಸಲಾಗಿದೆ. ಇಷ್ಟೆಲ್ಲಾ ವೆಚ್ಚಾಡಿದರೂ ಶಿಕ್ಷಣ, ಪೌಷ್ಟಿಕತೆ, ಆರೋಗ್ಯದ ಕ್ಷೇತ್ರಗಳಲ್ಲಿ ಹಿಂದುಳಿದಿದೆ. ಶಿಕ್ಷಣ  ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ಕೊಡಬೇಕು ಎಂದು ಸೂಚಿಸಿ  ಪ್ರೊ.ಛಾಯಾ ದೇವಡಗಾಂವಕರ್ ಅವರ ಅಧ್ಯಕ್ಷತೆಯಲ್ಲಿ   ಸಮಿತಿಯನ್ನು ರಚಿಸಲಾಗಿದೆ. ಇವರು ವರದಿಯನ್ನು ಸಲ್ಲಿಸಿದ್ದು, ಸರ್ಕಾರ ಪರಿಶೀಲಿಸಿ ಜಾರಿಗೆ ತರಲಾಗುವುದು

ಇದರಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾಕ್ಷರತೆ ಸುಧಾರಣೆಯಾಗಲಿದೆ ಎಂದರು. ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು ನೀಡಿದ್ದು, ಹೆಚ್ಚು ಆಸ್ಪತ್ರೆಗಳನ್ನು ಸ್ಥಾಪಿಸಲು ಸೂಚಿಸಲಾಗಿದೆ. 371 ಜೆ ಜಾರಿಯಾದ ಮೇಲೆ 10000 ವೈದ್ಯಕೀಯ 8000 ಇಂಜಿನಿಯರಿಂಗ್ 12000 ಡೆಂಟಲ್ ಮತ್ತಿತರ ಕೋರ್ಸುಗಳಿಗೆ ಸೇರಿದ್ದಾರೆ. 80% ಭರ್ತಿ ಪ್ರಕ್ರಿಯೆ ಸ್ಥಳೀಯವಾಗಿಯೇ ಆಗಬೇಕೆಂದು ಸೂಚಿಸಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಏನೆಲ್ಲಾ ಮಾಡಲು ಸಾಧ್ಯವಿದೆಯೋ ಅದನ್ನು ಮಾಡುತ್ತಿದ್ದೇವೆ. ರಾಜ್ಯದಲ್ಲಿ 900 ಕೆಪಿಎಸ್ ಶಾಲೆಗಳನ್ನು ತೆರೆಯಲಾಗುವುದು. ಈ ಭಾಗದ ಅಭಿವೃದ್ಧಿಗೆ  300  ಕೆಪಿಎಸ್ ಶಾಲೆಗಳನ್ನು ತೆರೆಯಲು ಸೂಚಿಸಿದೆ ಎಂದರು.

ಎಲ್ಲಾ ಜಿಲ್ಲೆಗಳೂ ಸಮಾನವಾಗಿ ಅಭಿವೃದ್ಧಿಯಾದಾಗ ಮಾತ್ರ ಅಸಮಾನತೆ ಹೋಗಲಾಡಿಸಲು ಸಾಧ್ಯ. ಜಾತಿ ವ್ಯವಸ್ಥೆ ಇರುವುದರಿಂದ ಎಲ್ಲರಿಗೂ ಸಮಾನ ಅವಕಾಶಗಳು ಸಿಕ್ಕಿಲ್ಲ. 1949 ನವೆಂಬರ್ 25 ರಂದು ಅಂಬೇಡ್ಕರ್ ಅವರು ಮಾಡಿದ ಭಾಷಣದಲ್ಲಿ ಸಮಾಜಿಕ,  ಆರ್ಥಿಕ ಸ್ವಾತಂತ್ರ್ಯ ಸಿಗದೇ ಹೋದರೆ ರಾಜಕೀಯ ಸ್ವಾತಂತ್ರ್ಯದಿಂದ ಸಮಾನತೆ ಸಾಧ್ಯವಿಲ್ಲ ಎಂದಿದ್ದರು. ಸಂವಿಧಾನ ಜಾರಿಗೆ ಬಂದಾಗ ವೈರುಧ್ಯತೆ ಇರುವ ಸಮಾಜಕ್ಕೆ ಕಾಲಿಡುತ್ತಿದ್ದು, ಅಸಮಾನತೆ ತೊಲಗಿಸದೆ ಹೋದರೆ ಆ ಜನರೇ ಸ್ವಾತಂತ್ರ್ಯ ಸೌಧವನ್ನು ಧ್ವಂಸ ಮಾಡ್ತಾರೆ ಎಂದಿದ್ದರು. ಆ ಕಾರಣಕ್ಕಾಗಿಯೇ ಅನೇಕ ಭಾಗ್ಯಗಳನ್ನು ಮತ್ತು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದರು.


Share this with Friends

Related Post