Mon. Dec 23rd, 2024

ಮಹಿಳೆಯರ ಅಭಿವೃದ್ಧಿಗೆ good ಸಹಕಾರಿ: ಪ್ರಮೀಳಾ

Share this with Friends

ಮೈಸೂರು,ಫೆ.28: ಮಹಿಳೆಯರು ಅಭಿವೃದ್ಧಿಹೊಂದಲು ಸ್ವ-ಉದ್ಯೋಗ ಬ್ಯೂಟಿಷಿಯನ್ ಸಹಕಾರಿಯಾಗಲಿದೆ ಎಂದು
ನಿಕಟಪೂರ್ವ ನಗರಪಾಲಿಕ ಸದಸ್ಯೆ ಪ್ರಮೀಳಾ ಭರತ್ ಹೇಳಿದರು.

ಪ್ರಸ್ತುತ ದಿನಗಳಲ್ಲಿ ಬ್ಯೂಟಿಷಿಯನ್ ಗೆ ಬಹುಬೇಡಿಕೆ ಇದ್ದು, ಈ ಕೆಲಸದಿಂದ ಮಹಿಳೆಯರು ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ತಿಳಿಸಿದರು.

ನಗರದ ಶಾರದಾದೇವಿ ನಗರದಲ್ಲಿ ಸಮೃದ್ಧಿ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಉಚಿತ 50 ದಿನದ ಬ್ಯೂಟಿಷಿಯನ್ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ನಾತಕೋತ್ತರ ಪದವೀದದರು ಸಹ ಈ ಬ್ಯೂಟಿಷಿಯನ್ ತರಬೇತಿ ಪಡೆದು ಮದುವೆ ಸಮಾರಂಭಗಳಲ್ಲಿ ತಮದೇ ಆದ‌ ಕಲೆ ತೋರಿ ಉತ್ತಮ ಆದಾಯ ಪಡೆಯುತ್ತಿದ್ದಾರೆ, ಬ್ಯೂಟಿಷಿಯನ್ ಆಗಿ ಸ್ವಂತ ದುಡಿಮೆ ಆರಂಭಿಸಿದರೆ ಅವರು ಹೊರಗೆ ಹೋಗಬೇಕಾದ ಅಗತ್ಯವಿಲ್ಲ ಎಂದು ತಿಳಿಸಿದರು.

ಅಲ್ಪ ಅವಧಿಯ ತರಬೇತಿ ಮೂಲಕ ಕಾಲೇಜು ಅವಧಿ ನಂತರ ಮನೆಯಲ್ಲೇ ಕೇಶವಿನ್ಯಾಸ, ಐಬ್ರೋ, ಫೇಷಿಯಲ್, ಬ್ಲೀಚಿಂಗ್ ಸೇರಿದಂತೆ ಅನೇಕ ಸೌಂದರ್ಯ ವೃದ್ಧಿಸುವ ಕೆಲಸ ಮಾಡಿಕೊಳ್ಳಬಹುದಾಗಿದೆ.
ಕಲಿಯಲು ಆಸಕ್ತಿ ಇರುವ ಯುವತಿಯರು ಹಾಗೂ ಮಹಿಳೆಯರು 9964874954 ನಂಬರಿಗೆ ಸಂಪರ್ಕಿಸಬಹುದಾಗಿದೆ

ಈ ವೇಳೆ ರುಕ್ಮಿಣಿ ,ಇಂದು ಕುಮಾರಿ, ದಾಕ್ಷಾಯಿಣಿ, ಇಂದ್ರಾಕ್ಷಿ ಮತ್ತಿತರರು ಹಾಜರಿದ್ದರು.


Share this with Friends

Related Post