Mon. Dec 23rd, 2024

ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್ ನಿಧನ

Share this with Friends

ಬೆಂಗಳೂರು,ಫೆ.29: ನಿವೃತ್ತ ಐಎಎಸ್ ಅಧಿಕಾರಿ‌ ಹಾಗೂ ನಟ ಕೆ.ಶಿವರಾಮ್ ಅವರು ನಿಧನರಾಗಿದ್ದಾರೆ.

ಬಾ ನಲ್ಲೆ ಮಧು ಚಂದ್ರಕೆ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಕೆ.ಶಿವರಾಮ್ ಸಕ್ರಿಯ ರಾಜಕಾರಣಿ ಯಾಗಿದ್ದರು.

ಕನ್ನಡ‌ ಭಾಷೆಯಲ್ಲಿ ಐಎಎಸ್ ಪಾಸ್ ಮಾಡಿದ ಮೊದಲ ಅಧಿಕಾರಿ ಎಂಬ ಹೆಗ್ಗಳಿಕೆ ಕೆ.ಶಿವರಾಮ್ ಅವರದು.

ಕಳೆದ ಹಲವು ದಿನಗಳ ಹಿಂದೆ ಅವರ‌ ರಕ್ತದೊತ್ತಡದಲ್ಲಿ ಸಮಸ್ಯೆ ಉಂಟಾಗಿದ್ದರಿಂದ ಚಿಕೆತ್ಸೆ ಪಡೆದಿದ್ದರು ಚೇತರಿಸಿಕೊಂಡು ಲವಲವಿಕೆಯಿಂದಲೇ ಇದ್ದರು.

ನಿನ್ನೆ ಅವರಿಗೆ ಹೃದಯಾಘಾತದ ಜೊತೆಗೆ ಬ್ರೈನ್ ಹ್ಯಮಾರೇಜ್ ಆಗಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇಂದು‌ ಅವರು‌ ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದ್ದಾರೆ.ಸಂಜೆ 5.30ರ‌ವರೆಗೂ ಶಿವರಾಮ್ ನಿಧನ ವಾರ್ತೆಯನ್ನು ನಂಬಬಾರದು ಎಂದೇ ಕುಟುಂಬದವರು‌ ಹೇಳಿದ್ದರು.

ಕಡೆಗೆ‌ ಅಧಿಕೃತ ವಾಗಿ‌ ಅವರು ನಿಧನರಾಗಿದ್ದಾರೆಂದು ಘೋಷಿಸಲಾಯಿತು.
ಕೆ.ಶಿವರಾಮ್ ಅವರಿಗೆ 71 ವರ್ಷ ವಯಸ್ಸಾಗಿತ್ತು,ನಿವೃತ್ತರಾದ ನಂತರ ರಾಜಕೀಯದಲ್ಲೂ ತೊಡಗಿಸಿಕೊಂಡರು,
ಜೆಡಿಎಸ್,ಕಾಂಗ್ರೆಸ್,ಬಿಜೆಪಿಯಲ್ಲೂ ಕೆಲಸ ಮಾಡಿದ್ದು, ಛಲವಾದಿ ಮಹಾಸಭಾದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ಶಿವರಾಮ್ ಅವರ ಪಾರ್ಥೀವ ಶರೀರವನ್ನು ಅಭಿಮಾನಿಗಳ ದರ್ಶನಕ್ಕೆ‌ ರವೀಂದ್ರ ಕಲಾಕ್ಷೇತ್ರದಲ್ಲಿ ಇಡಲಾಗುತ್ತದೆ.ನಾಳೆ‌ ಅವರ‌ ಅಂತಿಮ‌ ಸಂಸ್ಕಾರ ನೆರವೇರಲಿದೆ.

ಪತ್ನಿ‌,ಮಕ್ಕಳು‌‌ ಹಾಗೂ‌ ಅಪಾರ ಅಭಿಮಾನಿಗಳನು‌‌ ಅವರು‌ ಅಗಲಿದ್ದಾರೆ.


Share this with Friends

Related Post