ಮೈಸೂರು, ಮಾ.1: ಕೆಎಸ್ಒಯು ನಿಂದ ಈ ಬಾರಿ ಘಟಿಕೋತ್ಸವದಲ್ಲಿ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 19ನೇ ಘಟಿಕೋತ್ಸವ ಮಾರ್ಚ್ 3ರಂದು ನಡೆಯಲಿದೆ ಎಂದು ಮುಕ್ತ ವಿವಿಯ ಕುಲಪತಿ ಪ್ರೊ. ಶರಣಪ್ಪ ಅವರು ತಿಳಿಸಿದರು.
ನಗರದ ಮುಕ್ತಗಂಗೋತ್ರಿಯಲ್ಲಿರುವ ಕೆಎಸ್ಒಯು ನಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರೊ. ಶರಣಪ್ಪ ಅವರು ಈ ಬಗ್ಗೆ ಮಾಹಿತಿ ನೀಡಿದರು.
ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮಾಹಿತಿ ಆಯುಕ್ತ ಡಾ. ಹೆಚ್.ಸಿ ಸತ್ಯನ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಂ ವೀರೇಶ್ ಹಾಗೂ ಎಸ್ ಬಿ ಸಿ ಶಿಕ್ಷಣ ಕಾರ್ಯದರ್ಶಿ ಮೀರ ಶಿವಲಿಂಗಯ್ಯ ಅವರುಗಳಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ ಎಂದು ತಿಳಿಸಿದರು.
10276 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಈ ಪೈಕಿ 7,869 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ,30 ಮಂದಿಗೆ ಚಿನ್ನದ ಪದಕ, 37 ಮಂದಿಗೆ ನಗದು ಬಹುಮಾನ ವಿತರಿಸಲಾಗುತ್ತದೆ ಎಂದು ಪ್ರೊ. ಶರಣಪ್ಪ
ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಪರೀಕ್ಷಾಂಗ ಕುಲಸಚಿವ ಪ್ರೊ. ಕೆ.ಬಿ ಪ್ರವೀಣ್, ಕುಲ ಸಚಿವ ಪ್ರೊ. ಕೆ ಎಲ್ ಎನ್ ಮೂರ್ತಿ, ಡೀನ್ ಅಕಾಡೆಮಿಕ್ ಪ್ರೊ. ಲಕ್ಷ್ಮಿ, ಡೀನ್ ಸ್ಟಡಿ ಸೆಂಟರ್ ಪ್ರೊ. ರಾಮನಾಥನ್ ನಾಯ್ಡು, ಪ್ರಭಾರ ಹಣಕಾಸು ಅಧಿಕಾರಿ ಡಾ. ಬಿ ಎಂ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.