Mon. Dec 23rd, 2024

ಸರ್ಕಾರದ ನಡೆ ಅನುಮಾನ ಮೂಡಿಸಿದೆ:ಅಶೋಕ್ ಟೀಕೆ

Share this with Friends

ಬೆಂಗಳೂರು, ಮಾ.1: ಪಾಕಿಸ್ತಾನ್ ಪರ ಘೋಷಣೆ ಕೂಗಿದ ಪ್ರಕರಣದಲ್ಲಿ ಸರ್ಕಾರದ ನಡೆ ಅನುಮಾನ ಮೂಡಿಸುತ್ತಿದೆ ಎಂದು ಪ್ರತಿಪಕ್ಷದ ನಾಯಕ ಅಶೋಕ್ ಹೇಳಿದ್ದಾರೆ.

ಎಫ್ಎಸ್ಎಲ್ ವರದಿ ಕೈಸೇರಿ ಐದಾರು ಗಂಟೆ ಕಳೆದಿದ್ದರೂ ಇನ್ನೂ ವರದಿಯನ್ನ ಬಹಿರಂಗಪಡಿಸಲು ಮೀನ-ಮೇಷ ಎಣಿಸುತ್ತಿರುವ ರಾಜ್ಯ ಸರ್ಕಾರದ ನಡೆ ಅನುಮಾನಕ್ಕೆಡೆ ಮಾಡಿದೆ ಎಂದು ‌ತಿಳಿಸಿದ್ದಾರೆ.

ವರದಿ ಬಹಿರಂಗ ಪಡಿಸುತ್ತೀರೋ ಇಲ್ಲವೋ ಎನ್ನುವ ನಡೆಯ ಮೇಲೆ ತಮ್ಮ‌ ಕಾಂಗ್ರೆಸ್ ಪಕ್ಷ ನಿಜವಾಗಿಯೂ ದೇಶಪ್ರೇಮಿಗಳ ಪರ ಇದೆಯೋ ಅಥವಾ ದೇಶದ್ರೋಹಿಗಳ ಪರ ಇದೆಯೋ ಎಂಬುದನ್ನು ಕನ್ನಡಿಗರು ನಿರ್ಧಾರ ಮಾಡುತ್ತಾರೆ ಎಂದು ಅಶೋಕ್ ಟ್ವೀಟ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.


Share this with Friends

Related Post