Mon. Dec 23rd, 2024

ಸಂಸದ ಡಾ.ಉಮೇಶ್ ಜಾಧವ್ ಬಲಗೈ ಬಂಟನ‌ ಬರ್ಬರ ಹತ್ಯೆ

Share this with Friends

ಕಲಬುರಗಿ,ಮಾ.1: ಸಂಸದ ಡಾ.ಉಮೇಶ್ ಜಾಧವ್ ಬಲಗೈ ಬಂಟನನ್ನು ಬರ್ಬರವಾಗಿ ಹತ್ಯೆ ಮಾಡಿದ್ದು, ಕಲಬುರಗಿ ಜನತೆ‌ ಬೆಚ್ಚಿಬಿದ್ದಿದೆ.

ಗಿರೀಶ್ ಚಕ್ರ ಎಂಬವರನ್ನು ಭೀಕರವಾಗಿ ಹತ್ಯೆ‌ ಮಾಡಲಾಗಿದ್ದು, ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಸಾಗನೂರ ಗ್ರಾಮದ ಜಮೀನಿನಲ್ಲಿ ಕೊಲೆ ಮಾಡಲಾಗಿದೆ.

ಕಳೆದ ನಾಲ್ಕು ದಿನಗಳ ಹಿಂದೆ ಕಲಬುರಗಿ ಬಿ.ಎಸ್ ಎನ್ ಎಲ್ ಸಲಹಾ ಸಮಿತಿಗೆ ನಿರ್ದೇಶಕರಾಗಿ ಸಂಸದ ಜಾಧವ್ ಆಯ್ಕೆ ಮಾಡಿದ್ದರು. ಸಲಹಾ ಸಮಿತಿ ನಿರ್ದೇಶಕ ನೇಮಕ ಹಿನ್ನೆಲೆ ಪಾರ್ಟಿ ಕೊಡುವುದಾಗಿ ಜಮೀನಿಗೆ ಕರೆಸಿ ಸ್ನೇಹಿತರೇ ಬರ್ಬರವಾಗಿ ಕೊಲೆ ಮಾಡಿದ್ದಾರೆಂದು ಗಿರೀಶ್‌ ಬೆಂಬಲಿಗರು ಆರೋಪಿಸಿದ್ದಾರೆ.

ಕೊಲೆಗೂ ಮುನ್ನ ಕಣ್ಣಿಗೆ ಖಾರದ ಪುಡಿ ಎರಚಿ ನಂತರ ಹತ್ಯೆಗೈಯಲಾಗಿದೆ. ಸಾಗನೂರ ಗ್ರಾಮದ ಸಚಿನ್ ಹಾಗೂ ಗ್ಯಾಂಗ್ ಕೊಲೆ ಮಾಡಿರಬಹುದೆಂದು ಶಂಕಿಸಲಾಗು್ದು, ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಇತ್ತೀಚೆಗಷ್ಟೇ ಹಿರಿಯ ಬಿಜೆಪಿ ಮುಖಂಡ ಮಹಾಂತಪ್ಪಾ ಆಲೂರೆ ಅವರ ಬರ್ಬರ ಹತ್ಯೆಯ ಬೆನ್ನಲ್ಲೇ ಇದೀಗ ಮತ್ತೊಂದು ಹತ್ಯೆ ನಡೆದಿರುವುದು ಜನರಲ್ಲಿ ಆತಂಕ ಮೂಡಿಸಿದೆ.


Share this with Friends

Related Post