Sat. Nov 2nd, 2024

ವಿಧ್ಯಾರ್ಥಿಗಳಿಗೆ ಗುಲಾಬಿ ನೀಡಿ ಶುಭ ಕೋರಿದ ಕೃಷ್ಣರಾಜ ಯುವ ಬಳಗ

Share this with Friends

ಮೈಸೂರು,ಮಾ.1:ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಾರಂಭವಾಗಿದ್ದು,
ಕೃಷ್ಣರಾಜ ಯುವ ಬಳಗದ ಸದಸ್ಯರು ವಿದ್ಯಾರ್ಥಿಗಳಿಗೆ‌ ಗುಲಾಬಿ ನೀಡಿ‌ ಶುಭ ಹಾರಿಸಿದರು.

ನಂಜುಮಳಿಗೆ ಯಲ್ಲಿರುವ ಗೋಪಾಲಸ್ವಾಮಿ ಶಿಕ್ಷಣ ಸಂಸ್ಥೆ,ಕಾಲೇಜಿನ ಸೆಂಟರ್ ನಲ್ಲಿ ಪರೀಕ್ಷೆ ಎದುರಿಸುತ್ತಿರುವ ವಿಧ್ಯಾರ್ಥಿಗಳಿಗೆ ಗುಡ್ ಲಕ್ ಹೇಳಿ,ಮೈಸೂರಿಗೆ ಉನ್ನತ ಫಲಿತಾಂಶ ಬರಲೆಂದು ಹಾರೈಸಿದರು.

ಈ‌ ವೇಳೆ ಕೆಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ಮಾತನಾಡಿ,
ಪರೀಕ್ಷೆಯನ್ನು ಹೆದರದೆ ಸಂಭ್ರಮದಿಂದ ಬರೆಯಿರಿ ಆಗ ನಿರೀಕ್ಷೆಗಿಂತಲೂ ಹೆಚ್ಚಿನ ಅಂಕಗಳನ್ನು ಪಡೆಯಬಹುದು ಎಂದು ಹೇಳಿದರು.

ವಿದ್ಯಾರ್ಥಿಗಳು ಪರೀಕ್ಷೆ ಶತ್ರು ಎಂದು ಪರಿಗಣಿಸಿದರೆ ವರ್ಷವಿಡೀ ಕಲಿತ ಪಾಠಗಳೆಲ್ಲ ಮರೆತು ಹೋಗುತ್ತವೆ, ಯಾವುದೇ ಕಾರಣಕ್ಕೂ ಪರೀಕ್ಷೆ ಭೂತ ಎಂದುಕೊಳ್ಳಬೇಡಿ ಹಬ್ಬದ ರೀತಿಯಲ್ಲಿ ಸಂಭ್ರಮಿಸಿ ಎಂದು ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯವನ್ನು ಪೋಷಕರು ತುಂಬಬೇಕು ಎಂದು ಸಲಹೆ ನೀಡಿದರು.

ಪರೀಕ್ಷೆ ಎಂಬ ಭಯ, ಒತ್ತಡದಿಂದ ಮೊದಲು ಹೊರ ಬನ್ನಿ,ಇಲ್ಲವಾದಲ್ಲಿ ನೀವು ಕಲಿತ ಎಲ್ಲ ಪಾಠಗಳು ಮರೆತು ಬಿಡಬಹುದು ಎಂತಹ ಕಠಿಣ ಸಂದರ್ಭದಲ್ಲೂ ನೀವು ಕೀಳರಿಮೆ ಇಟ್ಟುಕೊಳ್ಳಬಾರದು. ಪೋಷಕರು ಕೂಡ ಮಕ್ಕಳ ಮೇಲೆ ನಂಬಿಕೆ ಇಡಬೇಕು ಎಂದು ಬಸವರಾಜ್ ಬಸಪ್ಪ ಹೇಳಿದರು.

ಈ‌ ವೇಳೆ ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಗೌರಿಶಂಕರ್ ನಗರದ ಶಿವಕುಮಾರ್, ತೀರ್ಥ ಕುಮಾರ, ಮಂಜುನಾಥ್, ದಯಾನಂದ್, ನವೀನ್ ಕೆಂಪಿ, ನಟರಾಜ್, ಕಂಸಾಳೆ ರವಿ ಮತ್ತಿತರರು ಹಾಜರಿದ್ದರು.


Share this with Friends

Related Post