Mon. Dec 23rd, 2024

ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ:ಬೆಚ್ಚಿಬಿದ್ದ‌ ಸಿಲಿಕಾನ್‌ ಸಿಟಿ ಜನ

Share this with Friends

ಬೆಂಗಳೂರು,ಮಾ.1: ಸಿಲಿಕಾನ್ ಸಿಟಿಯ ಎಚ್‍ಎಎಲ್‍ನಲ್ಲಿರುವ ಬ್ರೂಕ್‌ ಫೀಲ್ಡ್ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದು ಸಿಲಿಕಾನ್ ಸಿಟಿಯ ಜನ ಬಿಚ್ಚಿ ಬಿದ್ದಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು.ಅವಘಡದಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಬಾಂಬ್‌ ನಿಷ್ಕ್ರಿಯ ದಳ ಹಾಗೂ ಎಫ್‌ಎಸ್‌ಎಲ್‌ ಅಧಿಕಾರಿಗಳು ಹಾಗೂ ಹೆಚ್‌ಎಎಲ್‌ ಪೊಲೀಸರು ಧಾವಿಸಿ ಪರಿಶೀಲನೆ‌ ನಡೆಸಿದರು.

ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ,ಸ್ಪೋಟಕ್ಕೆ ನಿಖರವಾದ ಕಾರಣ‌ ಗೊತ್ತಾಗಿಲ್ಲ ಎಫ್ ಎಸ್ ಎಲ್ ವರದಿ ಬರಬೇಕು,ನಾವು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದೇವೆ ಎಂದು ಹೆಚ್‌ಎಎಲ್‌ ಪೊಲೀಸರು ತಿಳಿಸಿದ್ದಾರೆ.

ಸ್ಪೋಟದಲ್ಲಿ ಐದು ಮಂದಿ ಗಾಯಗೊಂಡಿದ್ದಾರೆ,ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.ಆದರೆ ಅವರಲ್ಲಿ ಒಬ್ಬರು ಮಾತ್ರ ಶಾಕ್ ಗೆ ಒಳಗಾದವರಂತೆ‌‌ ಇದ್ದಾರೆ ಎಂದು ಬ್ರೂಕ್ ಫೀಲ್ಡ್ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರದೀಪ್ ಮಾಧ್ಯಮ ದವರಿಗೆ ತಿಳಿಸಿದ್ದಾರೆ.

ಬ್ಯಾಗ್ ಇಟ್ಟುಕೊಂಡಿದ್ದ ಅಪರಿಚಿತ ವ್ಯಕ್ತಿ ಹೋಟೆಲಿಗೆ ಬಂದಿದ್ದ,ಆತನ ಮೇಲೆ‌ ಅನುಮಾನವಿದೆ ಬ್ಯಾಗ್ ನಲ್ಲಿ ಸ್ಪೋಟಕ‌ ವಸ್ತುಗಳಿದ್ದಿರಬಹುದು ಎಂದು ಹೊಟೆಲುನಲಿದ್ದವರು ತಿಳಿಸಿದ್ದು,ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.

ಸ್ಥಳಕ್ಕೆ ಬೆಂಗಳೂರು ‌ಪೊಲೀಸ್ ಆಯುಕ್ತ‌ ಬಿ.ದಯಾನಂದ್‌ ಭೇಟಿ ನೀಡಿ‌ ಪರಿಶೀಲಿಸಿದರು.ಸುಟ್ಟುಹೋದ ಬ್ಯಾಗ್ ಪತ್ತೆಯಾಗಿದ್ದು,ಅದರಲ್ಲಿ ಸ್ಪೋಟಕ ವಸ್ತುಗಳಿದ್ದವೆಂದು ತಿಳಿದುಬಂದಿದೆ.

ಈ‌ ಹೋಟೆಲ್‌ಗೆ ಸಾಕಷ್ಟು ‌ಹಾನಿಯಾಗಿದ್ದು ಮುಂದೆ ನಿಲ್ಲುಸಿದ್ದ ವಾಹನಗಳಿಗೂ ಬೆಂಕಿ ತಗುಲಿ ಸುಟ್ಟಿವೆ.


Share this with Friends

Related Post