Mon. Dec 23rd, 2024

ಕಾಡಾ ಕಚೇರಿಗೆ ಕಾವೇರಿ ಕ್ರಿಯಾ‌ ಸಮಿತಿ ಸದಸ್ಯರ ಮುತ್ತಿಗೆ ಯತ್ನ

Share this with Friends

ಮೈಸೂರು, ಮಾ.1: ರಾಜ್ಯ ಸರ್ಕಾರ ಕಾವೇರಿ ನೀರಿನ ವಿಚಾರದಲ್ಲಿ ವಿಫಲವಾಗಿರುವುದನ್ನು ಖಂಡಿಸಿ ಕಾಡಾ ಕಚೇರಿಗೆ ಕಾವೇರಿ ಕ್ರಿಯಾ‌ ಸಮಿತಿ ಸದಸ್ಯರು ಮುತ್ತಿಗೆ ಯತ್ನ ನಡೆಸಿದರು

ಕಾಡಾ ಕಚೇರಿಗೆ ತೆರಳಿ ಮುತ್ತಿಗೆ ಹಾಕಲು ಯತ್ನಿಸಿದ ಕೂಡಲೇ ಪೊಲೀಸರು ಕಾವೇರಿ ಕ್ರಿಯಾಸಮಿತಿ ಹೋರಾಟಗಾರರನ್ನು ಬಂಧಿಸಿದರು.

ಕಾವೇರಿ ನೀರಿನ ಉಳಿವಿಗಾಗಿ ಕಾವೇರಿ ಸಮಿತಿಯ ಅಧ್ಯಕ್ಷ ಎಸ್. ಜಯಪ್ರಕಾಶ್ ನೇತೃತ್ವದಲ್ಲಿ ಮುತ್ತಿಗೆ‌ ಯತ್ನ ಮಾಡಲಾಯಿತು.

ಈ ಸಂದರ್ಭದಲ್ಲಿ ಪೊಲೀಸರು ಕಾವೇರಿ ಸಮಿತಿಯ ಎಲ್ಲಾ ಸದಸ್ಯರನ್ನು ಹೋರಾಟಗಾರರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು .

ಪ್ರಧಾನ ಸಂಚಾಲಕ ಮೂಗೂರು ನಂಜುಂಡಸ್ವಾಮಿ, ಮೆಲ್ಲಹಳ್ಳಿ ಮಹಾದೇವ ಸ್ವಾಮಿ, ಎಂ ಜೆ ಸುರೇಶ್ ಗೌಡ, ತೇಜೇಶ್ ಲೋಕೇಶ್ ಗೌಡ , ಬೋಗಾದಿ ಸಿದ್ದೇಗೌಡ, ವರಕೂಡು ಕೃಷ್ಣೆಗೌಡ, ಶಿವಲಿಂಗಯ್ಯ, ಸುರೇಶ್ ಗೋಲ್ಡ್, ಮಹಾದೇವ ಸ್ವಾಮಿ, ರಾಜಶೇಖರ್, ಹೊನ್ನೇಗೌಡ , ಸೋಮೇಗೌಡ , ಆಟೋ ಮಹದೇವ್, ಮಂಜುಳಾ, ಪ್ರಭುಶಂಕರ್, ಸಿಂದುವಳ್ಳಿ ಶಿವಕುಮಾರ್, ಕೃಷ್ಣಯ್ಯ , ಭಾಗ್ಯಮ್ಮ, ನಾಗರಾಜ್, ನೇಹಾ, ಅಕ್ಬರ್, ಕೃಷ್ಣಪ್ಪ , ಪ್ರಭಾಕರ, ಹನುಮಂತಯ್ಯ ಮತ್ತಿತರರು ಪಾಲ್ಗೊಂಡಿದ್ದರು.


Share this with Friends

Related Post