Mon. Dec 23rd, 2024

ಮಾಸ್ಕ್, ಟೋಪಿ ಹಾಕಿದ್ದ ವ್ಯಕ್ತಿ ಬ್ಲಾಸ್ಟ್ ಮಾಡಿದ್ದಾನೆ:ಸಿದ್ದು

Share this with Friends

ಮೈಸೂರು, ಮಾ.2: ರಾಮೇಶ್ವರ ಕೆಫೆಯಲ್ಲಿ
ಮಾಸ್ಕ್, ಟೋಪಿ ಹಾಕಿದ್ದ ವ್ಯಕ್ತಿ ತಿಂಡಿಗೆ ಟೋಕನ್ ಪಡೆದು,ಅಲ್ಲೇ ಕುಳಿತು ಟೈಮರ್ ಫಿಕ್ಸ್ ಮಾಡಿ ಬ್ಲಾಸ್ಟ್ ಮಾಡಿ ನಂತರ ಹೋಗಿದ್ದಾನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನಲ್ಲಿ ಪೊಲೀಸ್ ಆರೋಗ್ಯ ಕೇಂದ್ರ ಉದ್ಘಾಟನೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ‌ ಮಾತನಾಡಿದ ಸಿಎಂ,
ಅಪರಿಚಿತ ಬಸ್ಸಿನಿಂದ ಇಳಿಯುವುದು ಹೋಟೆಲ್ ಗೆ ಬರುವುದು ಎಲ್ಲಾ ಸಿಸಿಟಿವಿಯಲ್ಲಿ ದೃಶ್ಯಾವಳಿಗಳು ಸಿಕ್ಕಿವೆ ಎಂದು ಹೇಳಿದರು.

ವ್ಯಕ್ತಿಯ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ,ಇದು ಒಬ್ಬ ವ್ಯಕ್ತಿಯ ಕೃತ್ಯಾನಾ ಅಥವಾ ಸಂಘಟನೆಯ ಕೈವಾಡವೆ ಎಂಬುದು ಗೊತ್ತಾಗಿಲ್ಲ ಎಂದು ತಿಳಿಸಿದರು.

ಇದು ಭಯೋತ್ಪಾದಕ ಕೃತ್ಯ ಎಂಬುದು ಸ್ಪಷ್ಟವಾಗಿಲ್ಲ,ಎಲ್ಲಾ ತನಿಖೆಯ ಹಂತದಲ್ಲಿದೆ,
ನಾನು ಕೂಡ ಘಟನಾ ಸ್ಥಳಕ್ಕೆ‌ ಭೇಟಿ ನೀಡುತ್ತೇನೆ ನಂತರ ಗಾಯಾಳುಗಳ ಆರೋಗ್ಯ ವಿಚಾರಿಸಲು ಹೋಗುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಒಟ್ಟು 9 ಜನರು ಗಾಯಗೊಂಡಿದ್ದು,ಎಲ್ಲರೂ ಪ್ರಾಣಯಪಾಯದಿಂದ ಪಾರಾಗಿದ್ದಾರೆ,ಪ್ರಕರಣದ ತನಿಖೆ‌ ಚುರುಕುಗೊಳಿಸುವಂತೆ‌ ಸೂಚಿಸಿದ್ದೇನೆ ಎಂದು ಸಿಎಂ ಹೇಳಿದರು.

ಮಂಗಳೂರಿನ ಕುಕ್ಕರ್ ಬಾಂಬ್ ಬ್ಲಾಸ್ಟ್ ಗು ನಿನ್ನೆಯ ಬ್ಲಾಸ್ಟ್ ಗು ಸಾಮ್ಯತೆ ಇರಬಹುದಾ ಎಂಬ ವರದಿಗಾರರ ಪ್ರಶ್ನೆಗೆ,
ಅದು ಕುಕ್ಕರನಲ್ಲಿ ಆದ ಬ್ಲಾಸ್ಟ್.
ಇಲ್ಲಿ ಯಾವ ಕುಕ್ಕರ್ ನಲ್ಲೂ ಬ್ಲಾಸ್ಟ್ ಆಗಿಲ್ಲ ಹಾಗಾಗಿ ಸಾಮ್ಯತೆ ಇದೆ ಎಂದು ಹೇಳಲಾಗದು ಎಂದು ಉತ್ತರಿಸಿದರು.

ಅಲ್ಪಸಂಖ್ಯಾತ ತೃಷ್ಟಿಕರಣದಿಂದ ಇಂತಹ ಕೃತ್ಯ ನಡೆದಿದೆ ಎಂಬ ಬಿಜೆಪಿ ಆರೋಪಿಸಿದೆಯಲ್ಲಾ ಎಂಬ ಮತ್ತೊಂದು ಪ್ರಶ್ನೆಗೆ ಬಿಜೆಪಿ ಯವರ ಕಾಲದಲ್ಲಿ ಆದ ಬಾಂಬ್ ಬ್ಲಾಸ್ಟ್ ಗಳಿಗೆ ಏನು ಕಾರಣ,ಅದೂ ಅಲ್ಪಸಂಖ್ಯಾತರ ತೃಷ್ಟಿಕರಣವಾ ಎಂದು ಮರು ಪ್ರಶ್ನಿಸಿದರು.

ಅಲ್ಪಸಂಖ್ಯಾತ ಪರಕ್ಕೂ ಇದಕ್ಕೂ ಏನು ಸಂಬಂಧ,ಬಿಜೆಪಿ ಇದನ್ನು ರಾಜಕೀಯ ಮಾಡುತ್ತಿದೆ,ಈ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.


Share this with Friends

Related Post