ಬೆಂಗಳೂರು, ಮಾ.2: ಬಾಂಬ್ ಸ್ಪೋಟಗೊಂಡು ಭಾಗಶಹ ಹಾನಿಯಾಗಿರುವ ರಾಮೇಶ್ವರಂ ಕೆಫೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಭೇಟಿ ನೀಡಿ ಪರಿಶೀಲಿಸಿದರು.
ಪೂರ್ವ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತರಾದ ರಮಣಗುಪ್ತ ಸೇರಿದಂತೆ ಪೊಲೀಸ್ ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಸ್ಪೋಟವಾಗಿರುವ ಸ್ಥಳಗಳನ್ನು ತೋರಿಸಿದರು.
ಈ ವೇಳೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ ಗೋವಿಂದರಾಜು ಹಾಗೂ ಕೆಫೆಯ ಮ್ಯಾನೇಜರ್ ಗಳು ಹಾಗೂ ಸಿಬ್ಬಂದಿ ಹಾಜರಿದ್ದು ಸ್ಪೋಟದ ವಿವರಣೆ ನೀಡಿದರು.
ನಂತರ ಸಿಎಂ ಹೆಚ್ಚುವರಿ ಪೊಲೀಸ್ ಆಯುಕ್ತರಾದ ರಮಣಗುಪ್ತ ಅವರಿಂದ ಬಾಂಬ್ ಸ್ಫೋಟದ ಕುರಿತು ಇಂಚಿಂಚು ಮಾಹಿತಿಯನ್ನು ಪಡೆದುಕೊಂಡರು ಮತ್ತು ತನಿಖೆಯನ್ನು ಚುರುಕುಗೊಳಿಸುವಂತೆ ಸೂಚಿಸಿದರು.