Sat. Apr 19th, 2025

ಪಲ್ಸ್ ಪೋಲಿಯೊ ಕಾರ್ಯಕ್ಕೆ ಚಾಲನೆ

Share this with Friends

ಬಳ್ಳಾರಿ,ಮಾ.3: ಇಂದು ರಾಜ್ಯಾದ್ಯಂತ ಪಲ್ಸ್ ಪೋಲಿಯೊ ಕಾರ್ಯ ಭರದಿಂದ ನಡೆಯಿತು.

ರಾಜ್ಯಾದ್ಯಂತ ಆಯಾ ಜಿಲ್ಲೆಗಳಲ್ಲಿ ಜಿಲ್ಲಾ‌ ಉಸ್ತುವಾರಿ‌‌ ಸಚಿವರು ಚಾಲನೆ ನೀಡಿದರು, ತಾಯಂದಿರು ತಮ್ಮ ಕಂದಮ್ಮಗಳನ್ನು ಕರೆತಂದು ಪೊಲಿಯೊ ಹನಿಗಳನ್ನು ಹಾಕಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳ್ಳಾರಿ ಜಿಲ್ಲೆ ಕಾರ್ಯಕ್ರಮದ ನಿಮಿತ್ತ ಭೇಟಿ ನೀಡಿದ್ದರು.

ಈ ವೇಳೆ ಹೊಸಪೇಟೆಯ ಕಮಲಾಪುರ ಪ್ರಾಥಮಿಕ‌ ಆರೋಗ್ಯ ಕೇಂದ್ರದಲ್ಲಿ ಪಲ್ಸ್ ಪೊಲೀಯೊ ಕಾರ್ಯಕ್ರಮವನ್ನು ಸಿಎಂ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು ಪೊಲಿಯೊ ಲಸಿಕೆ‌ ಹಾಕಿಸುವುದರಿಂದ ಮಕ್ಕಳ‌ ಅಂಗ‌ ಊನತೆಯನ್ನು ತಡೆಗಟ್ಟಬಹುದು ತಾಯಂದಿರು ಮರೆಯದೆ ಮಕ್ಕಳಿಗೆ‌ ಲಸಿಕೆ ಹಾಕಿಸಬೇಕು ಎಂದು ತಿಳಿಹೇಳಿದರು.

ಶಾಸಕ ಗವಿಯಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Share this with Friends

Related Post