Sat. Apr 19th, 2025

ನವೀಕೃತ ಅಶೋಕಪುರಂ ರೈಲ್ವೆ ಸ್ಟೇಷನ್ ಯಾರ್ಡ್ ಲೋಕಾರ್ಪಣೆ

Share this with Friends

ಮೈಸೂರು,ಮಾ.4: ನವೀಕರಿಸಿದ ಮೈಸೂರಿನ ಅಶೋಕಪುರಂ ರೈಲ್ವೆ ಸ್ಟೇಷನ್ ಯಾರ್ಡ್ ಅನ್ನು ಸಂಸದ ಪ್ರತಾಪ್ ಸಿಂಹ ಲೋಕಾರ್ಪಣೆ ಮಾಡಿದರು.

ಈ‌ ವೇಳೆ ಮಾತನಾಡಿದ ಪ್ರತಾಪ್ ಸಿಂಹ, 4 ಮೆಮು ರೈಲು,1 ಮಾಲ್ಗುಡಿ ರೈಲು, 1 ಕಾವೇರಿ ಎಕ್ಸ್ ಪ್ರೆಸ್ ರೈಲು ಸೇರಿದಂತೆ ಹಲವು ಟ್ರೈನ್ ಗಳು ಅಶೋಕ್ ಪುರಂ ರೈಲ್ವೇ ನಿಲ್ದಾಣದಿಂದಲೇ ಹೊರಡುವಂತೆ ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು

ಕಡಕೊಳ ರೈಲ್ವೆ ನಿಲ್ದಾಣದ ಅಭಿವೃದ್ಧಿಗೂ ಕ್ರಮ ವಹಿಸಲಾಗುವುದು ಎಂದು ಹೇಳಿದ ಅವರು, ಯಾರೋ ಗುತ್ತಿಗೆದಾರನ ಬಳಿ ಕಮಿಷನ್ ತೆಗೆದುಕೊಳ್ಳಲು ನಾನು ರಾಜಕೀಯಕ್ಕೆ ಬಂದಿಲ್ಲ ಎಂದು ತಿಳಿಸಿದರು.

ಯಾವ ರಾಜಕೀಯ ಹಿನ್ನೆಲೆ ಇಲ್ಲದೆ ಇದ್ದರೂ ನನಗೆ ಮತ್ತು ಶ್ರೀವತ್ಸ ಅವರಿಗೆ ಜನ‌ ಆಶೀರ್ವಾದ ಮಾಡಿದ್ದಾರೆ. ಅದರಂತೆ ನಾನು ಜನ‌ಪರ ಕೆಲಸಗಳನ್ನು ಮಾಡುತ್ತಾ ಬಂದಿದ್ದೇನೆ. ಮುಂದಿನ‌ ದಿನಗಳಲ್ಲಿ ಮತ್ತಷ್ಟು ಕೆಲಸ ಮಾಡಲು ನನಗೆ ಮತ್ತೊಂದು ಬಾರಿ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

ನಾನು ಯಾವುದೇ ಹೋರಾಟ ಮಾಡಿದ್ದರೂ ಅದು ಜನರಿಗಾಗಿ,ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳ ರಿಪೋರ್ಟ್ ಕಾರ್ಡ್ ಮುಂದಿಟ್ಟುಕೊಂಡು ಮತ್ತೊಮ್ಮೆ ಜನಾದೇಶ ಪಡೆಯಲು ಮುಂದಾಗಿದ್ದೇನೆ‌ ಎಂದು ಪ್ರತಾಪ್ ಸಿಂಹ ಹೇಳಿದರು.

ಒಟ್ಟು 37.5 ಕೋಟಿ ವೆಚ್ಚದಲ್ಲಿ ನವೀಕರಣ ಕಾರ್ಯ ನಡೆದಿದ್ದು, ಈ ಪೈಕಿ 22 ಕೋಟಿ ಸಂಚಾರ ಸೌಲಭ್ಯಗಳ ಉನ್ನತೀಕರಣಕ್ಕೆ ವಿನಿಯೋಗ ಮಾಡಲಾಗಿದೆ ಹಾಗೂ 10.5 ಕೋಟಿ ರೂ. ಪ್ರಯಾಣಿಕರ ಸೌಕರ್ಯ ವೃದ್ದಿಗೆ ವಿನಿಯೋಗಿಸಲಾಗಿದೆ.

ಸ್ಥಳೀಯ ಶಾಸಕ ಶ್ರೀವತ್ಸ, ಮಾಜಿ ಮೇಯರ್ ಶಿವಕುಮಾರ್ ಹಾಗೂ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಈ ವೇಳೆ ಹಾಜರಿದ್ದರು.


Share this with Friends

Related Post