ಮೈಸೂರು: ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಹುರುಳಗೇರೆ ಗ್ರಾಮದ ಹೆಮ್ಮೆಯ ಪುತ್ರ ಗಿರೀಶ್ ಹೆಚ್.ಎನ್. ಅವರಿಗೆ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು (KSOU) ಕನ್ನಡ ವಿಷಯದಲ್ಲಿ ಡಾಕ್ಟರೇಟ್ (ಪಿಹೆಚ್.ಡಿ) ಪದವಿಯನ್ನು ಪ್ರದಾನಿಸಿದೆ.
ಜನವರಿ 31, 2026 ರಂದು ಮೈಸೂರಿನ ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 21ನೇ ವಾರ್ಷಿಕ ಘಟಿಕೋತ್ಸವನಡೆಯಿತು. ಈ ಸಮಾರಂಭದಲ್ಲಿ ಸುಮಾರು 10,600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ ಪಡೆದಿದ್ದು ಇದೇ ಸಮಾರಂಭದಲ್ಲಿ ಕೆಎಸ್ಒಯು ಪ್ರಾದೇಶಿಕ ನಿರ್ದೇಶಕ ಗಿರೀಶ್ ಹೆಚ್.ಎನ್ ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರಿಂದ ಪಿಹೆಚ್’ಡಿ ಪದವಿ ಪ್ರದಾನಿಸಲಾಯಿತು.

ಸಂಶೋಧನಾ ವಿವರ:
ಗಿರೀಶ್ ಅವರು ಮೈಸೂರಿನ ಕೆಎಸ್ಒಯು ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕರಾದ ಡಾ. ಡಿ. ನಾಗಣ್ಣ ಅವರ ಮಾರ್ಗದರ್ಶನದಲ್ಲಿ “ಗುಬ್ಬಿ ತಾಲ್ಲೂಕಿನ ಶಾಸನಗಳು: ಸಾಂಸ್ಕೃತಿಕ ಅಧ್ಯಯನ” ಎಂಬ ವಿಷಯದ ಕುರಿತು ಮಂಡಿಸಿದ ಮಹಾಪ್ರಬಂಧವನ್ನು ವಿಶ್ವವಿದ್ಯಾನಿಲಯವು ಅಂಗೀಕರಿಸಿ ಈ ಪದವಿ ನೀಡಿದೆ.
ಹಿನ್ನೆಲೆ:
ಸಿ.ಎಸ್. ಪುರ ಹೋಬಳಿಯ ಹುರುಳಗೇರೆ ಗ್ರಾಮದ ನಿವಾಸಿಗಳಾದ ನಂಜೇಗೌಡ ಮತ್ತು ರತ್ನಮ್ಮ ದಂಪತಿಯ ಪುತ್ರರಾದ ಇವರು, ಗ್ರಾಮೀಣ ಭಾಗದಿಂದ ಬಂದು ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಪ್ರಸ್ತುತ ಸೇವೆ:
ಸದ್ಯ ಗಿರೀಶ್ ಹೆಚ್.ಎನ್. ಅವರು ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರದಲ್ಲಿ ಪ್ರಾದೇಶಿಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಈ ಸಾಧನೆಗೆ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

