Tue. Dec 24th, 2024

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗಲೇ ಪ್ರಯಾಣಿಕ ಸಾವು

Share this with Friends

ಹಾಸನ,ಮಾ.5: ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗಲೇ ಪ್ರಯಾಣಿಕರೊಬ್ಬರು ಸಾವನ್ನಪ್ಪಿದ ಘಟನೆ‌ ನಡೆದಿದೆ.

ಹಾಸನ ಜಿಲ್ಲೆ, ಚನ್ನರಾಯಪಟ್ಟಣದಲ್ಲಿ ಘಟನೆ ನಡೆದಿದ್ದು ಟಿ.ಸ್ವಾಮಿ ಮಂಡ್ಯ ಜಿಲ್ಲೆ, ಇಲ್ಲೇನಹಳ್ಳಿ ಗ್ರಾಮದ ಟಿ.ಸ್ವಾಮಿ (39) ಮೃತಪಟ್ಟ ವ್ಯಕ್ತಿ.

ಬಾಂಬೆಯಿಂದ ಚನ್ನರಾಯಪಟ್ಟಣಕ್ಕೆ ಬಂದ GA-07-T-3303 ನಂಬರ್‌ನ ಸ್ಲೀಪರ್ ಕೋಚ್ ಖಾಸಗಿ ಬಸ್ ಅನ್ನು ಚಾಲಕ ಕೆಲ ಸಮಯ ನಿಲ್ಲಿಸಿದ.

‌ಬಸ್‌ ನಿಂದ ಬಹುತೇಕ ಪ್ರಯಾಣಿಕರು ಕೆಳಗಿಳಿದಿದ್ದರು.ಆದರೆ ಬಸ್‌ನಲ್ಲೇ ನಿದ್ರೆ ಮಾಡುತ್ತಿದ್ದ ಸ್ಥಿತಿಯಲ್ಲಿ ಟಿ.ಸ್ವಾಮಿ ಇದ್ದರು.
ಆಗ‌ ನಿರ್ವಾಹಕ ಟಿ.ಸ್ವಾಮಿಯನ್ನು ಎದ್ದೇಳಿ ಎಂದು‌ ಕೂಗಿದ್ದಾರೆ.ಆದರೆ ಅಷ್ಟರಲ್ಲಿ ಆತ‌ ಸಾವನ್ನಪ್ಪಿದ್ದರು.

ವಿಷಯ ತಿಳಿಯುತ್ತಿದ್ದಂತೆ
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ
ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಂತರ ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಮೃತದೇಹ ರವಾನೆ ಮಾಡಲಾಯಿತು ಮನೆಯವರಿಗೆ ವಿಷಯ ತಿಳಿಸಲು ಪೊಲೀಸರು ಯತ್ನಿಸಿದ್ದಾರೆ,ಬಹುಶಃ ಹೃದಯಾಘಾತದಿಂದ ‌ಮೃತರಾಗಿರ
ಬಹುದೆಂದು ಪೊಲೀಸರು ತಿಳಿಸಿದ್ದಾರೆ.


Share this with Friends

Related Post