Fri. Nov 1st, 2024

ವಿಕಲಚೇತನ ಸಾಧಕರನ್ನು ಗೌರವಿಸಿದ ಕೆವಿನ್‌ಕೇರ್‌, ಎಬಿಲಿಟಿ ಫೌಂಡೇಶನ್

Share this with Friends

ಬೆಂಗಳೂರು,ಮಾ.6: ಸಾಮಾನ್ಯವಾಗಿ ಯಾವುದೆ ಸಾಧನೆಗೈದವರನ್ನು ಗೌರವಿಸುವುದು ಮಾಮೂಲು,ಆದರೆ ಬೆಂಗಳೂರಿನ ಸಂಸ್ಥೆ ವಿಕಲಚೇತನ ಸಾಧಕರನ್ನು ಗೌರವಿಸಿರುವುದು ನಿಜಕ್ಕೂ ವಿಶೇಷ.

ಬೆಂಗಳೂರಿನ ಪ್ರಮುಖ ಎಫ್‌ಎಂಸಿಜಿ ಸಂಸ್ಥೆ ಕೆವಿನ್‌ಕೇರ್, ಎಬಿಲಿಟಿ ಫೌಂಡೇಶನ್ ಸಹಭಾಗಿತ್ವದಲ್ಲಿ ನಿನ್ನೆ ನಡೆದ 22ನೇ ಕೆವಿನ್‌ಕೇರ್ ಎಬಿಲಿಟಿ ಅವಾರ್ಡ್ಸ್ 2024ರಲ್ಲಿ ದೇಶದ 5 ವಿಕಲಚೇತನ ಸಾಧಕರನ್ನು ಗೌರವಿಸಿದ್ದು ಸ್ತುತ್ಯಾರ್ಹ.

ಈ ಆವೃತ್ತಿಯಲ್ಲಿ ವಾರ್ಷಿಕ ಪ್ರಶಸ್ತಿಯು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅಂಗವಿಕಲ ಸಾಧಕರ ಸಾಧನೆಗಳನ್ನು ಸಂಸ್ಥೆ ಬೆಳಕಿಗೆ ತಂದಿದೆ.

ಕೆವಿನ್‌ಕೇರ್ ಅವಾರ್ಡ್ಸ್ 2024 ಸ್ವೀಕರಿಸಿದ ಸಾಧಕರು: ವಿದ್ಯಾ ವೈ- ಬೆಂಗಳೂರು ಕರ್ನಾಟಕ, ಡಾ. ಕೇತ್ನಾ ಎಲ್ ಮೆಹ್ತಾ – ಮುಂಬೈ, ಮಹಾರಾಷ್ಟ್ರ, ವಿನಯಾನ ಖುರಾನಾ- ನವದೆಹಲಿ, ಐಶ್ವರ್ಯ ಟಿ. ವಿ- ಸಿಕಂದರಾಬಾದ್, ತೆಲಂಗಾಣ, 5. ಛೋಂಜಿನ್ ಆಂಗ್ಮೊ-ನವದೆಹಲಿ.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೆವಿನ್‌ಕೇರ್ ಪ್ರೈವೇಟ್ ಲಿಮಿಟೆಡ್ ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಸಿ.ಕೆ.ರಂಗನಾಥನ್, ವರ್ಷದಿಂದ ವರ್ಷಕ್ಕೆ ಕೆವಿನ್‌ಕೇರ್ ಎಬಿಲಿಟಿ ಅವಾರ್ಡ್ಸ್ ವಿಕಲಚೇತನ ವ್ಯಕ್ತಿಗಳ ಸಾಧನೆಯನ್ನು ಗೌರವಿಸುತ್ತಾ ಬಂದಿದೆ ಎಂದು ಹೇಳಿದರು.

ವಿಕಲಚೇತನ ಸಾಧಕರನ್ನು ಕರೆತಂದು ಜಗತ್ತಿಗೆ ತೋರಿಸುವ ಮೂಲಕ ಅವರ ಪ್ರಯಾಣದಲ್ಲಿ ಸಂಸ್ಥೆ ಭಾಗವಾಗಿದ್ದಕ್ಕೆ ಬಹಳ ಸಂತೋಷವಾಗಿದೆ ಎಂದು ತಿಳಿಸಿದರು.

ಈ ವರ್ಷದ ಪ್ರಶಸ್ತಿ ಪುರಸ್ಕೃತರನ್ನು ಗೀತರಚನೆಕಾರ ಮತ್ತು ಚಿತ್ರಕಥೆಗಾರ ಮದನ್ ಕರ್ಕಿ, ಸಾಯಿ ವಿಶ್ವವಿದ್ಯಾಲಯದ ಕುಲಪತಿ ಕೆ.ವಿ.ರಮಣಿ, ಚಲನಚಿತ್ರ ನಿರ್ಮಾಪಕ ಭರತ್ ಬಾಲಾ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮುಖ್ಯಸ್ಥ ಸುರೇಶ್ ರಾಮನ್, ಎಲ್‌.ವಿ ಪ್ರಸಾದ್ ಕಾಲೇಜ್ ಆಫ್ ಮೀಡಿಯಾ ಸ್ಟಡೀಸ್ ನ ಮಾಜಿ ಎಚ್‌ಒಡಿ ಆಫ್ ಡೈರೆಕ್ಷನ್ ಲತಾ ಮುರುಗನ್ ಅವರ ತೀರ್ಪುಗಾರರ ಸಮಿತಿಯು ಆಯ್ಕೆ ಮಾಡಿದೆ.

ವಿಕಲಚೇತನ ಸಾಧಕ ವಿಜೇತರನ್ನು ಅಭಿನಂದಿಸಿದ ಎಬಿಲಿಟಿ ಫೌಂಡೇಶನ್‌ ಸಂಸ್ಥಾಪಕರು ಮತ್ತು ಗೌರವ ಕಾರ್ಯನಿರ್ವಾಹಕ ನಿರ್ದೇಶಕಿ ಜಯಶ್ರೀ ರವೀಂದ್ರನ್ ಮಾತನಾಡಿ,ಸತತವಾಗಿ 22ನೇ ವರ್ಷ ನಾವು ವಿಕಲಚೇತನರ ಸಾಧಕರಿಗೆ ಗೌರವ ಸಲ್ಲಿಸಿದ್ದೇವೆ ಇದು ನಮಗೆ ಹೆಮ್ಮೆಯ ವಿಷಯ ಎಂದು ಸಂತಸಪಟ್ಟರು.

ಅಂಗವೈಕಲ್ಯವು ಸಾಮರ್ಥ್ಯಕ್ಕೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಕೆವಿನ್‌ಕೇರ್ ಎಬಿಲಿಟಿ ಅವಾರ್ಡ್ಸ್ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಿಜೋರಾಂನ ಸಾಂಪ್ರದಾಯಿಕ ಚೆರಾವ್ ಮತ್ತು ಚೆಹ್ ಲಾಮ್ ನೃತ್ಯ,ಕಿವುಡ ಮತ್ತು ಶ್ರವಣದೋಷವುಳ್ಳ ವಿಶೇಷ ಶಾಲೆ ಎಫಾಥಾದ ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯ ಪ್ರೇಕ್ಷಕರ ಮನಸೂರೆಗೊಂಡಿತು.


Share this with Friends

Related Post