Fri. Nov 1st, 2024

ರಂಗಾಯಣದಲ್ಲಿ ಇಂದಿನಿಂದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ

Share this with Friends

ಮೈಸೂರು, ಮಾ.6: ಮೈಸೂರಿನ ಪ್ರಸಿದ್ದ ರಂಗಾಯಣದಲ್ಲಿ ಇಂದಿನಿಂದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಆರಂಭವಾಗಲಿದೆ.

ಈ ಬಾರಿಯ ಬಹುರೂಪಿ ನಾಟಕೋತ್ಸವ ಇವ ನಮ್ಮವ ಇವ ನಮ್ಮವ ಎಂಬ ವಚನದ ಸಾಲಿನ ಆಶಯ ಶೀರ್ಷಿಕೆಯೊಂದಿಗೆ ನಡೆಯಲಿರುವುದು ವಿಶೇಷ.

ಇಂದಿನಿಂದ ಆರಂಭವಾಗಲಿರುವ ಬಹುರೂಪಿ ನಾಟಕೋತ್ಸವ ಮಾರ್ಚ್ 11 ರವರೆಗೆ ನಡೆಯಲಿದ್ದು,ರಂಗಾಯಣ ಆವರಣ ನವ ವಧುವಿನಂತೆ
ಸಿಂಗಾರಗೊಂಡಿದೆ.

ಇಂದು ಸಂಜೆ 5.30ಕ್ಕೆ ರಂಗಾಯಣದ ಕಿನ್ನರಜೋಗಿ ಆವರಣದಲ್ಲಿ ಹಿರಿಯ ಜನಪದ ಗಾಯಕ ಡಾ. ಮಳವಳ್ಳಿ ಮಹಾದೇವಸ್ವಾಮಿಯವರು ಜನಪದ ಸಂಭ್ರಮವನ್ನು ಉದ್ಘಾಟಿಸಲಿದ್ದಾರೆ. ಮಾ.7 ರಂದು ಸಂಜೆ 4.30ಕ್ಕೆ ವನರಂಗದಲ್ಲಿ ನಾಟಕೋತ್ಸವಕ್ಕೆ ಕನ್ನಡದ ಹಿರಿಯ ಲೇಖಕ ಜಯಂತ್ ಕಾಯ್ಕಿಣಿ ಚಾಲನೆ ನೀಡಲಿದ್ದಾರೆ.

ಬಹುರೂಪಿ ನಾಟಕೋತ್ಸವದಲ್ಲಿ ಉತ್ತರ ಪ್ರದೇಶ, ಮುಂಬೈ, ಕೊಲ್ಕತ್ತಾ, ಮಣಿಪುರ, ಕೇರಳ ಹಾಗೂ ಮಹಾರಾಷ್ಟ್ರದ ಆರು ನಾಟಕಗಳು ಕನ್ನಡ ಭಾಷೆಯ 10 ಮತ್ತು ತುಳು ಭಾಷೆಯ ಒಂದು ನಾಟಕ ಸೇರಿದಂತೆ ಒಟ್ಟು 17 ನಾಟಕಗಳು ಪ್ರದರ್ಶನಗೊಳ್ಳಲಿದೆ.

ಮಹಿಳಾ ಆಶಯವುಳ್ಳ ಒಂದು ಯಕ್ಷಗಾನ ಪ್ರದರ್ಶನವೂ ಇರಲಿದೆ,ಅಲ್ಲದೆ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಜಾನಪದ ಪ್ರಾಕಾರ ಸೇರಿದಂತೆ ನಾಡಿನ ವಿವಿಧ ಜಿಲ್ಲೆಗಳ 16 ಜಾನಪದ ಕಲಾತಂಡಗಳು ಪ್ರದರ್ಶನ ನೀಡಲಿವೆ.

ಮಾ.9 ಮತ್ತು10 ರಂದು ಎರಡು ದಿನಗಳ ಕಾಲ ರಾಷ್ಟ್ರೀಯ ವಿಚಾರ ಸಂಕೀರ್ಣ ಕೂಡಾ ಹಮ್ಮಿಕೊಳ್ಳಲಾಗಿದೆ.

ಈ ಬಾರಿ ಚಲನಚಿತ್ರೋತ್ಸವ, ಜನಪದ ಸಂಭ್ರಮ, ಪುಸ್ತಕ ಮೇಳ, ಕರಕುಶಲ ಮೇಳ ಮತ್ತು ಪ್ರಾತ್ಯಕ್ಷಿಕೆ, ದೇಶಿಯ ಆಹಾರಮೇಳ, ಚಿತ್ರಕಲಾ ಪ್ರದರ್ಶನ, ಚಾರಿತ್ರಿಕ ದಾಖಲೆಗಳ ಪ್ರದರ್ಶನ ಹಾಗೂ ವಚನಾಂತರಂಗ ಪ್ರಮುಖ ಕಾರ್ಯಕ್ರಮಗಳಾಗಿವೆ.


Share this with Friends

Related Post