Thu. Mar 12th, 2026

ಕರ್ನಾಟಕ ಸರ್ಕಾರದ ಐತಿಹಾಸಿಕ ಹೆಜ್ಜೆ: ಕೃತಕ ಬುದ್ಧಿಮತ್ತೆ ಹೊಣೆಗಾರಿಕೆ ಸಮಿತಿ ರಚನೆ

Share this with Friends

ಬೆಂಗಳೂರು: ತಂತ್ರಜ್ಞಾನ ಲೋಕದಲ್ಲಿ ಕ್ರಾಂತಿ ಎಬ್ಬಿಸುತ್ತಿರುವ ಕೃತಕ ಬುದ್ಧಿಮತ್ತೆಯ (AI) ಬಳಕೆ ಮತ್ತು ಅದರ ನೈತಿಕತೆಯನ್ನು ನಿಯಂತ್ರಿಸಲು ಕರ್ನಾಟಕ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಎಐ ತಂತ್ರಜ್ಞಾನದ ಸುರಕ್ಷಿತ ಅಳವಡಿಕೆಗಾಗಿ ‘ ಕೃತಕ ಬುದ್ಧಿಮತ್ತೆ ಹೊಣೆಗಾರಿಕೆ ಸಮಿತಿ’ಯನ್ನು (Responsible AI Committee) ರಚಿಸಿ ಆದೇಶ ಹೊರಡಿಸಿದೆ.

ಕ್ರಿಸ್ ಗೋಪಾಲಕೃಷ್ಣನ್ ನೇತೃತ್ವ:

ಇನ್ಫೋಸಿಸ್ ಸಹ-ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಅವರನ್ನು ಈ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇವರೊಂದಿಗೆ ಐಟಿ-ಬಿಟಿ ಇಲಾಖೆಯ ಕಾರ್ಯದರ್ಶಿ ಡಾ. ಎನ್. ಮಂಜುಳಾ ಅವರು ಸಹ-ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಸಮಿತಿಯು ಕೈಗಾರಿಕಾ ತಜ್ಞರು, ಶಿಕ್ಷಣ ತಜ್ಞರು ಮತ್ತು ನೀತಿ ನಿರೂಪಕರನ್ನು ಒಳಗೊಂಡಿದ್ದು, ತಂತ್ರಜ್ಞಾನದ ದುರ್ಬಳಕೆ ತಡೆಯಲು ಮಾರ್ಗಸೂಚಿಗಳನ್ನು ಸಿದ್ಧಪಡಿಸಲಿದೆ.

ಸಮಿತಿಯ ಪ್ರಮುಖ ಕಾರ್ಯಗಳು:

ಸರ್ಕಾರಿ ಆಡಳಿತದಲ್ಲಿ ಮತ್ತು ಸಾರ್ವಜನಿಕ ಸೇವೆಗಳಲ್ಲಿ ಎಐ ಬಳಸುವಾಗ ಎದುರಾಗಬಹುದಾದ ಸವಾಲುಗಳ ಬಗ್ಗೆ ಸಮಿತಿಯು ಅಧ್ಯಯನ ನಡೆಸಲಿದೆ. ಮುಖ್ಯವಾಗಿ ಡೇಟಾ ಗೌಪ್ಯತೆ, ಸೈಬರ್ ಸುರಕ್ಷತೆ ಮತ್ತು ಎಐನಿಂದ ಆಗಬಹುದಾದ ತಪ್ಪು ಮಾಹಿತಿಯ ಹರಡುವಿಕೆಯನ್ನು ತಡೆಯಲು ಸಮಗ್ರ ಚೌಕಟ್ಟನ್ನು ಈ ಸಮಿತಿ ರೂಪಿಸಲಿದೆ.

ವರದಿ ಸಲ್ಲಿಕೆ ಕಾಲಮಿತಿ:

ಸರ್ಕಾರದ ಆದೇಶದಂತೆ, ಈ ತಜ್ಞರ ಸಮಿತಿಯು ತನ್ನ ಮೊದಲ ಮಧ್ಯಂತರ ವರದಿಯನ್ನು 60 ದಿನಗಳಲ್ಲಿ ಸಲ್ಲಿಸಬೇಕಿದೆ. ಇನ್ನು 90 ದಿನಗಳ ಒಳಗಾಗಿ ಎಐ ಬಳಕೆಯ ಸುರಕ್ಷತಾ ಮಾನದಂಡಗಳ ಕುರಿತು ಅಂತಿಮ ವರದಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಲಿದೆ.

ಎಐ ರಾಜಧಾನಿಯತ್ತ ಕರ್ನಾಟಕ:

“ಕರ್ನಾಟಕವನ್ನು ಜಾಗತಿಕ ಎಐ ರಾಜಧಾನಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಈ ಸಮಿತಿ ರಚನೆ ಮೊದಲ ಹೆಜ್ಜೆಯಾಗಿದೆ. ತಂತ್ರಜ್ಞಾನದ ಲಾಭದ ಜೊತೆಗೆ ಸಾಮಾನ್ಯ ಜನರ ಹಿತಾಸಕ್ತಿಯನ್ನು ರಕ್ಷಿಸುವುದು ನಮ್ಮ ಆದ್ಯತೆ,” ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ಕ್ರಮದ ಮೂಲಕ ಭಾರತದಲ್ಲೇ ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದಂತೆ ಸ್ಪಷ್ಟ ನೀತಿ ರೂಪಿಸುತ್ತಿರುವ ಮೊದಲ ರಾಜ್ಯಗಳಲ್ಲಿ ಕರ್ನಾಟಕ ಒಂದಾಗಿದೆ.

ಸಮಿತಿಯ ಸದಸ್ಯರು:

ಅಕ್ಸೆಂಚರ್ ಇಂಡಿಯಾದ ಕಂಟ್ರಿ ಮ್ಯಾನೇಜಿಂಗ್‌ ಡೈರೆಕ್ಟರ್‌– ಅಜಯ್ ವಿಜ್

 ಕಿಂಡ್ರಿಲ್ ಇಂಡಿಯಾ ಅಧ್ಯಕ್ಷ  – ಲಿಂಗರಾಜು ಸಾವ್ಕರ್ ಐಬಿಎಂ ಇಂಡಿಯಾ, ದಕ್ಷಿಣ ಏಷ್ಯಾ ಮುಖ್ಯ ತಂತ್ರಜ್ಞಾನ ಅಧಿಕಾರಿ – ಅಮಿತ್ ಸಿಂಘೀ

 ವಿಪ್ರೊ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ – ಸಂಜೀವ್ ಜೈನ್

ಐಐಐಟಿ ಬೆಂಗಳೂರು ನಿರ್ದೇಶಕ  – ಪ್ರೊ. ದೇಬಬ್ರತ ದಾಸ್

ರಾಷ್ಟ್ರೀಯ ಸಾಫ್ಟ್‌ವೇರ್ ಮತ್ತು ಸೇವಾ ಕಂಪನಿಗಳ ಸಂಘಟನೆ (ನಾಸ್ಕಾಂ) ಪ್ರಾದೇಶಿಕ ನಿರ್ದೇಶಕ  – ಭಾಸ್ಕರ್ ವರ್ಮ

 ಸರ್ವಂ ಎಐ ಸಹ ಸ್ಥಾಪಕ  – ವಿವೇಕ್ ರಾಘವನ

ಎಐ ಸಿಒಇ-ದ  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ – ಅಶೋಕ್ ಕಾಮತ್

 ಐಬಿಎಂ ಕಾನೂನು ವಿಭಾಗದ ಮುಖ್ಯಸ್ಥ  – ದಿನೇಶ್ ವಿಜಯಕುಮಾರ್

ಟ್ರೈಲೀಗಲ್ ತಂತ್ರಜ್ಞಾನ, ಮಾಧ್ಯಮ ಮತ್ತು ದೂರಸಂಪರ್ಕ ವಿಭಾಗದ ಮುಖ್ಯಸ್ಥ  – ರಾಹುಲ್ ಮಂಥನ್

ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ʼಕೆಐಟಿಎಸ್‌ʼನ ವ್ಯವಸ್ಥಾಪಕ ನಿರ್ದೇಶಕ


Share this with Friends

Related Post