ಬೆಂಗಳೂರು, ಮಾ.6: ನಮ್ಮ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಗಣನೀಯವಾಗಿ ಹೆಚ್ಚಳವಾಗಿದ್ದು ಇದನ್ನು ತಡೆಗಟ್ಟುವ ಕುರಿತು ಇಂದು ಚರ್ಚಿಸಲಾಯಿತು.
ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ರಾಡಿಸನ್ ಬ್ಲೂ ಏಟ್ರಿಯಾ ಹೋಟೆಲ್‌ನಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ, ಸೈಬರ್ ಅಪರಾಧಗಳ ತನಿಖಾ ತರಬೇತಿ ಮತ್ತು ಸಂಶೋಧನ ಕೇಂದ್ರದ ವತಿಯಿಂದ ಸೈಬರ್ ಅಪರಾಧ ತನಿಖಾ ಶೃಂಗಸಭೆ 2024 ಹಮ್ಮಿಕೊಳ್ಳಲಾಗಿತ್ತು.
ಶೇಂಗಸಭೆಯನ್ನು ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ಉದ್ಘಾಟಿಸಿದರು. ನಂತರ ಮಾತನಾಡಿದ ಸಚಿವರು ಒಂದಲ್ಲ ಒಂದು ರೀತಿಯಲ್ಲಿ ಸೈಬರ್ ಕ್ರೈಂ ಗಳು ದಿನನಿತ್ಯ ವರದಿಯಾಗುತ್ತಲೇ ಇದೆ ಇದನ್ನು ತಡೆಗಟ್ಟುವ ಕುರಿತು ಕ್ರಮ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಒಳಾಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾಶಂಕರ್, ಪೋಲಿಸ್ ಮಹಾನಿರ್ದೇಶಕ ಡಾಕ್ಟರ್ ಅಲೋಕ್ ಮೋಹನ್ ಮಾತನಾಡಿದರು.
ಸಿಐಡಿ ಕರ್ನಾಟಕ ಹಾಗೂ ಇನ್ಫೋಸಿಸ್ ಪ್ರತಿಷ್ಠಾನ ಮತ್ತು ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾ ಗಳೊಂದಿಗೆ ಒಪ್ಪಂದವನ್ನು ನವೀಕರಿಸಿದ್ದು ಈ ಸೈಬರ್ ಅಪರಾಧ ಶೃಂಗ ಸಭೆಯ ಮತ್ತೊಂದು ಮುಖ್ಯ ಅಂಶ.
ಇಂದಿನ ಶಂಖ ಸಭೆಯಲ್ಲಿ ರಾಜಸ್ಥಾನ, ಪಶ್ಚಿಮ ಬಂಗಾಳ, ಮೇಘಾಲಯ, ಗುಜರಾತ್, ತಮಿಳುನಾಡು, ಮಧ್ಯಪ್ರದೇಶ, ತೆಲಂಗಾಣ, ಹರಿಯಾಣ, ಜಾರ್ಖಂಡ್, ಛತ್ತೀಸ್ ಗಡ, ಮಹಾರಾಷ್ಟ್ರ, ದೆಹಲಿ, ಅಸ್ಸಾಂ, ಬಿಹಾರ ಮತ್ತಿತರ ಪೊಲೀಸ್ ಅಧಿಕಾರಿಗಳು ಹಾಗೂ ಪ್ರಮುಖ ತನಿಖಾ ಸಂಸ್ಥೆಗಳಾದ ಎನ್ ಐ ಎ, ಸಿಬಿಐ, ಇ ಡಿ ಅಧಿಕಾರಿಗಳು ಭಾಗವಹಿಸಿದ್ದರು.