Mon. Dec 23rd, 2024

ಅಗ್ನಿಗಾಹುತಿಯಾದ ತೊಟ್ಟಿ ಮನೆ

Share this with Friends

ನಂಜನಗೂಡು,ಮಾ.7: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಎರಡು ಮನೆಗಳು ಸುಟ್ಟು ಕರಕಲಾದ ಘಟನೆ ನಂಜನಗೂಡು ತಾಲೂಕು ಕಲ್ಮಳ್ಳಿ ಗ್ರಾಮದಲ್ಲಿ ನಡೆದಿದೆ.

ಇಡೀ ಗ್ರಾಮಕ್ಕೆ ಮಾದರಿಯಾಗಿದ್ದ ಸಹೋದರರ ತೊಟ್ಟಿ‌ ಎಂಬ ಖ್ಯಾತಿಯ ಮನೆ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ.

ತಡರಾತ್ರಿ ವಾಸದ ಮನೆಯ ಮುಂಭಾಗ ಅಳವಡಿಸಿದ ವಿದ್ಯುತ್ ಡಿಪಿ ಸ್ವಿಚ್ ಬೋರ್ಡ್ ನಿಂದ ಬೆಂಕಿ ಕಿಡಿ ಹಾರಿ ಮನೆಗೆ ಆವರಿಸಿದೆ.

ಮನೆಯ ಮಾಲೀಕರಾದ ಬಸವರಾಜಪ್ಪ ನಿದ್ರೆಯಿಂದ ಎದ್ದು ಬಂದು ಹೊರಗೆ ಬರುವಷ್ಟರಲ್ಲಿ ಮನೆಗೆ ಬೆಂಕಿ ಹೊತ್ತಿಕೊಂಡಿರುವುದು ಕಂಡು ಗಾಬರಿಯಿಂದ ನಿದ್ರೆಯಲ್ಲಿದ್ದ ಮನೆಯವರನ್ನು ಹೊರಗೆ ಕರೆತಂದು ರಕ್ಷಿಸಿದ್ದಾರೆ.

ದಿನಸಿ ಪದಾರ್ಥ, ಮನೆಯ ಪೀಠೋಪಕರಣಗಳು ಮನೆ ಮತ್ತು ಜಮೀನುಗಳ ದಾಖಲಗಳು,ಆಭರಣಗಳು ಪಾತ್ರೆ ಸಮಗ್ರಿಗಳು ಸೇರಿದಂತೆ ಲಕ್ಷಾಂತರ ಮೌಲ್ಯದ ಪದಾರ್ಥಗಳು ನಾಶವಾಗಿದೆ.

ಅದೃಷ್ಟವಶಾತ್ ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ.

ಬಿಳಿಗೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.


Share this with Friends

Related Post