Sat. Nov 2nd, 2024

ಮೈಸೂರಿನಲ್ಲಿ ಲೋಕಾಯುಕ್ತ ಅಧೀಕ್ಷಕರಿಂದ ಪರಿಶೀಲನೆ

Share this with Friends

ಮೈಸೂರು.ಮಾ.7: ಸಾಂಸ್ಕೃತಿಕ ನಗರಿಯ ವಿವಿಧೆಡೆ ಲೋಕಾಯುಕ್ತ ಅಧೀಕ್ಷಕರು ಪರಿಶೀಲನೆ ನಡೆಸಿದರು.

ಕರ್ನಾಟಕ ಲೋಕಾಯುಕ್ತ ಪೊಲೀಸ್ ಮಹಾನಿರ್ದೇಶಕರಾದ ಪ್ರಶಾಂತ್ ಕುಮಾರ್ ಠಾಕೂರ್, ಪೊಲೀಸ್ ಮಹಾ ನಿರೀಕ್ಷಕರಾದ ಸುಬ್ರಮಣ್ಯೇಶ್ವರ ರಾವ್ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ಲೋಕಾಯುಕ್ತ ಮೈಸೂರು ವಿಭಾಗದ ಪೊಲೀಸ್ ಅಧೀಕ್ಷಕ ವಿ.ಜೆ ಸಜೀತ್ ನೇತೃತ್ವದಲ್ಲಿ ವಿವಿಧೆಡೆ ಪರಿಶೀಲನೆ ನಡೆಸಲಾಯಿತು.

ನಗರದ ಕಸ ಬೀಸಾಡುವ ಸ್ಥಳಗಳು, ಕಸ ವಿಂಗಡಣೆ ಸ್ಥಳಗಳು, ಕಸ ಸಂಗ್ರಹಿಸಿ ವಿಲೇವಾರಿ ಮಾಡುವ ಸ್ಥಳಗಳು ,ಕಸ ತ್ಯಾಜ್ಯ ವಿಲೇವಾರಿ ಘಟಕಗಳಿಗೆ ವಿ.ಜೆ ಸಜೀತ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲಿಸಿತು.

ಪೌರ ಕಾರ್ಮಿಕರ ಕರ್ತವ್ಯಗಳು, ಕಸ ಸಂಗ್ರಹಿಸುವ ವಾಹನಗಳು, ಕಸ ಸಂಗ್ರಹಿಸಲು ವಾಹನಗಳನ್ನು ಸಮರ್ಪಕವಾಗಿ ಹಂಚಿಕೆ ಮಾಡಿರುವ ಬಗ್ಗೆ ಮಾಹಿತಿ ಪಡೆದರು ಹಾಗೂ ನಗರ ಪಾಲಿಕೆ ವಲಯ ಕಛೇರಿಗಳಿಗೆ ಖುದ್ದು ಭೇಟಿ ಮಾಡಿ ಪರಿಶೀಲನೆ ನಡೆಸಿದರು.

ಈ ವೇಳೆ ವಿ.ಜೆ ಸಜೀತ್ ಅವರು ಮಾತನಾಡಿ, ಪರಿಶೀಲನೆ ವೇಳೆ ಕಂಡುಬಂದ ಅಂಶಗಳ ಬಗ್ಗೆ ವಿಸ್ತ್ರುತ ವರದಿಯನ್ನು ಸಿದ್ದಪಡಿಸಿ ಲೋಕಾಯುಕ್ತರಿಗೆ ಸಲ್ಲಿಸಿ ಅವರ ಸೂಚನೆಯಂತೆ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಾರ್ಯಾಚರಣೆಯಲ್ಲಿ ಡಿ.ವೈ.ಎಸ್.ಪಿ ಗಳಾದ ಕೃಷ್ಣಯ್ಯ, ಮಾಲತೀಶ್, ಹಾಗೂ ಪೊಲೀಸ್ ನಿರೀಕ್ಷಕರುಗಳಾದ ಉಮೇಶ್, ಜಯರತ್ನ, ರೂಪಶ್ರೀ, ರವಿಕುಮಾರ್ ಮೈಸೂರು ಲೋಕಾಯುಕ್ತ ಪೊಲೀಸ್ ಠಾಣೆಯ ಸಿಬ್ಬಂದಿ ಪಾಲ್ಗೊಂಡಿದ್ದರು.


Share this with Friends

Related Post