Mon. Dec 23rd, 2024

ಆರ್‌ವಿವಿ ಟಿಐಎಫ್ಎ ಫಿಲ್ಮ್ ಅವಾರ್ಡ್ಸ್ ಮೂರನೇ ಆವೃತ್ತಿಗೆ ಸಿದ್ಧತೆ

Share this with Friends

ಬೆಂಗಳೂರು, ಮಾ.7: ಬೆಂಗಳೂರಿನ ಆರ್‌ವಿ ವಿಶ್ವವಿದ್ಯಾನಿಲಯವು ಟೀನ್ ಇಂಡೀ ಫಿಲ್ಮ್ ಅವಾರ್ಡ್ಸ್ (TIFA) ಮೂರನೇ ಆವೃತ್ತಿಗೆ‌ ಸಿದ್ಧತೆ ಭರದಿಂದ ಸಾಗಿದೆ

ಈ‌ ಬಾರಿ ಹಿಂದೆಂದಿಗಿಂತಲೂ ಚಿತ್ರೋತ್ಸವ ದೊಡ್ಡದಾಗಿದ್ದು ವಿದ್ಯಾರ್ಥಿಗಳ, ವಿದ್ಯಾರ್ಥಿಗಳಿಂದ ಮತ್ತು ವಿದ್ಯಾರ್ಥಿ ಚಲನಚಿತ್ರ ನಿರ್ಮಾಪಕರಿಗಾಗಿ,ನಡೆಯುವ ವಿಭಿನ್ನ ಚಿತ್ರೋತ್ಸವವಾಗಿದ್ದು ಯುವಜನತೆ‌ ಉತ್ಸುಕತೆಯಿಂದ ಎದುರು ನೋಡುತ್ತಿದ್ದಾರೆ.

ಜಗತ್ತಿನಾದ್ಯಂತ ಶಾಲೆ ಮತ್ತು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಚಲನಚಿತ್ರ ನಿರ್ಮಾಣದಲ್ಲಿನ ಶ್ರೇಷ್ಠತೆ ಮತ್ತು ಸೃಜನಶೀಲತೆಯ ಅಭಿವ್ಯಕ್ತಿ ಸಂಭ್ರಮಕ್ಕೆ ವೇದಿಕೆಯಾಗಿದೆ.

ಈ ಬಾರಿ ನಾಲ್ಕು ದಿನಗಳ ಚಿತ್ರೋತ್ಸವದಲ್ಲಿ ಚಿತ್ರ ಪ್ರದರ್ಶನಗಳು, ಕಾರ್ಯಾಗಾರಗಳು, ಚರ್ಚೆಗಳು ಇರಲಿವೆ, 30 ಹೆಚ್ಚು ದೇಶಗಳಿಂದ 300 ಕ್ಕೂ ಹೆಚ್ಚು ಚಲನಚಿತ್ರ ಸಲ್ಲಿಕೆಯಾಗಿದೆ, ಚಲನಚಿತ್ರ ತಯಾರಿಕೆ, ವಿಮರ್ಶೆ ಮತ್ತು ಕ್ಯುರೇಶನ್ ಉದ್ಯಮದ ಎಲ್ಲಾ ವಿಭಾಗಗಳಿಂದ 10 ಗೌರವಾನ್ವಿತ ಸ್ಪೀಕರ್‌ಗಳು ಮತ್ತು ಸಾವಿರಾರು ಪ್ರೇಕ್ಷಕರು TIFA 2024 ದಲ್ಲಿ ಪಾಲ್ಗೊಳ್ಳಲಿದ್ದು ಯುವ ಚಲನಚಿತ್ರ ನಿರ್ಮಾಪಕರಿಗೆ ಹೊಸ ಅನುಭವ ಆಗಲಿದೆ.

ಪ್ರಶಸ್ತಿ ವಿಜೇತ ಆಸ್ಟ್ರೇಲಿಯಾದ ಚಲನಚಿತ್ರ ನಿರ್ಮಾಪಕ, ನೈನಾ ಸೇನ್, ದಿ ಸಾಂಗ್ ಕೀಪರ್ಸ್ ಪ್ರದರ್ಶನದೊಂದಿಗೆ ನಾಲ್ಕು ದಿನಗಳ ಉತ್ಸವವು ಪ್ರಾರಂಭವಾಗಲಿದೆ.

ಕಾಲ್ಪನಿಕ, ಆನಿಮೇಷನ್ ಮತ್ತು ಪ್ರಾಯೋಗಿಕ ಸೇರಿದಂತೆ ಅನೇಕ ವಿಭಾಗಗಳೊಂದಿಗೆ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಹಿರಿಯ ಬಾಲಿವುಡ್ ಚಲನಚಿತ್ರ ನಿರ್ಮಾಪಕ ಮತ್ತು ಸ್ಟಾರ್-ಮೇಕರ್ ರಾಹುಲ್ ರಾವೈಲ್, ಲೇಖಕ-ಚಲನಚಿತ್ರ ನಿರ್ಮಾಪಕ ಮತ್ತು ಚಿಲ್ಡ್ರನ್ ಫಿಲ್ಮ್ ಸೊಸೈಟಿ ಆಫ್ ಇಂಡಿಯಾದ ಉಪಾಧ್ಯಕ್ಷ ರಿಂಕಿ ಭಟ್ಟಾಚಾರ್ಯ, ಯಥಾಕಥಾ ಇಂಟರ್‌ನ್ಯಾಶನಲ್ ಫಿಲ್ಮ್ ಅಂಡ್ ಲಿಟರೇಚರ್ ಫೆಸ್ಟಿವಲ್ ಮುಂಬೈನ ಸಂಸ್ಥಾಪಕ- ನಿರ್ದೇಶಕಿ ಚಾರು ಶರ್ಮಾ, ವಿಷುಯಲ್ ಡೆವಲಪ್‌ಮೆಂಟ್ ಆರ್ಟಿಸ್ಟ್ ಮತ್ತು ಪ್ರೊಡಕ್ಷನ್ ಡಿಸೈನರ್ ರೂಪಾಲಿ ಗಟ್ಟಿ, ಜನಪ್ರಿಯ ನಾಗಾಮೀಸ್ ನಿರ್ದೇಶಕ ಮತ್ತು ನಿರ್ಮಾಪಕ ಟಿಯಾಕುಮ್‌ಜುಕ್ ಐಯರ್, ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ 2023 ಸಾಕ್ಷ್ಯಚಿತ್ರ 1947: ಬ್ರೆಕ್ಸಿಟ್ ಇಂಡಿಯಾದ ನಿರ್ದೇಶಕ ಸಂಜೀವನ್ ಲಾಲ್, ಮತ್ತು ನಿರ್ಮಾಪಕ-ನಿರ್ದೇಶಕಿ ಐಶ್ವರ್ಯಾ ಯಾದವ್ ಮತ್ತಿತರರು ಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ಭಾರತೀಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ವಿಮರ್ಶಕ, ಅಂತರರಾಷ್ಟ್ರೀಯ ಲೇಖಕ-ಕ್ಯುರೇಟರ್ ಮತ್ತು ಆರ್‌ವಿ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಫಿಲ್ಮ್, ಮೀಡಿಯಾ ಮತ್ತು ಕ್ರಿಯೇಟಿವ್ ಆರ್ಟ್ಸ್‌ನ ಸ್ಥಾಪಕ ಡೀನ್, ಪ್ರೊ. ಪಿಯೂಷ್ ರಾಯ್ 2022ರಲ್ಲಿ ಟಿಐಎಫ್‌ ಅನ್ನು ಪ್ರಾರಂಭಿಸಿದರು.

ದಿ ಇಂಟರ್‌ನ್ಯಾಶನಲ್ ಫೆಡರೇಶನ್ ಆಫ್ ಫಿಲ್ಮ್ ಕ್ರಿಟಿಕ್ಸ್‌ನ ಪ್ರಧಾನ ಕಾರ್ಯದರ್ಶಿ ಪ್ರೇಮೇಂದ್ರ ಮಜುಂದಾರ್ ಈ ಚಿತ್ರೋತ್ಸವ ಕುರಿತು ಪ್ರತಿಕ್ರಿಯಿಸಿ, ನಾನು ಅನೇಕ ವಿದ್ಯಾರ್ಥಿ ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸಿದ್ದರೂ, ಹದಿಹರೆಯದ ಚಲನಚಿತ್ರ ನಿರ್ಮಾಪಕರಿಗೆ ಆದ್ಯತೆ ನೀಡುವ ಉತ್ಸವದ ಈ ವಿಶಿಷ್ಟ ಕಲ್ಪನೆ ಮತ್ತು ಅದು 30 ರಿಂದ 300 ಕ್ಕೂ ಹೆಚ್ಚು ಚಿತ್ರಗಳವರೆಗೆ ಬೆಳೆದಿದ್ದು ನೋಡಿ ನಾನು ತುಂಬಾ ಪ್ರಭಾವಿತನಾಗಿದ್ದೇನೆ ಎಂದು ತಿಳಿಸಿದ್ದಾರೆ.

ವೇಳಾಪಟ್ಟಿಗಳು ಮತ್ತು ಟಿಕೆಟ್ ಖರೀದಿ ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ ಸೈಟ್ https://bit.ly/49qAmfu ಗೆ
ಭೇಟಿ ನೀಡಬಹುದಾಗಿದೆ.


Share this with Friends

Related Post