Mon. Dec 23rd, 2024

ಮಕ್ಕಳ ಬಾಲ್ಯದ ಮುಗ್ದತೆಯನ್ನು ಕಸಿಯಬೇಡಿ:ಡಾ.ಶ್ವೇತಾ ಮಡಪ್ಪಾಡಿ ಸಲಹೆ

Share this with Friends

ಮೈಸೂರು, ಮಾ.7: ಮಕ್ಕಳು ನಮ್ಮ ಸಮಾಜದ ನೆಮ್ಮದಿಯ ಕೇಂದ್ರಗಳು, ಅವರ ಒಡನಾಟ ನಮ್ಮ ಒತ್ತಡವನ್ನು ಕಡಿಮೆ ಮಾಡಬಲ್ಲವು ಎಂದು ಚಿಂತಕಿ ಡಾ.ಶ್ವೇತಾ ಮಡಪ್ಪಾಡಿ ಹೇಳಿದರು.

ಮೈಸೂರಿನ ರೋಟರಿ ಬೃಂದಾವನ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಮಕ್ಕಳ ಪದವಿ ಪ್ರದಾನ ಹಾಗೂ ಅಜ್ಜ-ಅಜ್ಜಿಯರ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಕ್ಕಳ ಬಾಲ್ಯದ ಸಂಭ್ರಮವನ್ನು ಅವರ ಮೇಲೆ ಶೈಕ್ಷಣಿಕ ಒತ್ತಡವನ್ನು
ಹೇರುವುದರ ಮೂಲಕ ನಾವು ನಾಶಗೊಳಿಸುತ್ತಿದ್ದೇವೆ.

ಮಕ್ಕಳನ್ನು ಕೃತಕತೆಯ ಭಾವಗಳಿಗೆ ತಳುಕು ಹಾಕಿ ಅವರ ಬಾಲ್ಯದ ಮುಗ್ದತೆಯನ್ನು ನಾವು ನಾಶಗೊಳಿಸದಿರೋಣ ಎಂದು ಯುವ ಉದ್ಯಮಿ, ಚಿಂತಕಿ, ಧ್ವನಿ ಫೌಂಡೇಷನ್ ನ ಸ್ಥಾಪಕ ಅಧ್ಯಕ್ಷೆ ಡಾ. ಶ್ವೇತಾ ಮಡಪ್ಪಾಡಿ ಹೇಳಿದರು.

ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಅತಿ ಕಾಳಜಿ ತೋರುವ ಹೆತ್ತವರು ಹಲವು ಬಾರಿ ಅವರ ಆಯ್ಕೆಗಳ ವಿಷಯದಲ್ಲಿ ಎಡವುತ್ತಾರೆ. ಅತಿಯಾದ ಶೈಕ್ಷಣಿಕ ಒತ್ತಡ ಮಕ್ಕಳ ಮನೋವಿಕಾಸ ಕುಗ್ಗಿಸಿ ಭವಿಷ್ಯಕ್ಕೆ ಹೊಡೆತ ನೀಡಬಲ್ಲುದು. ಹಾಗಾಗಿ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಮಾಡುವುದೇ ಶಿಕ್ಷಣದ ಬಹುಮುಖ್ಯ ಆದ್ಯತೆ ಆಗಿರಬೇಕು ಎಂದು ಸಲಹೆ ನೀಡಿದರು.

ರೋಟರಿ ಬೃಂದಾವನದ ಮುಖ್ಯಸ್ಥರಾದ ಎ. ಜಿ. ನಂಜಪ್ಪ ಸ್ವಾಮಿ, ರೊ.ಮಂಜುನಾಥ್, ರೊ.ನಾಗೇಶ್, ರೊ.ಪ್ರಕಾಶ್ ಹನಸೋಗೆ, ಶಾಲೆಯ ಮುಖ್ಯ ಶಿಕ್ಷಕಿ ಉಷಾ ಎಂ. ಎಸ್. ಉಪಸ್ಥಿತರಿದ್ದರು.

ಇದೆ ಸಂದರ್ಭದಲ್ಲಿ ಯುಕೆಜಿ ಮಕ್ಕಳಿಗೆ ಪದವಿ ಪ್ರದಾನ ಮಾಡಲಾಯಿತು. ಮಕ್ಕಳು ಮಕ್ಕಳ ಅಜ್ಜ ಅಜ್ಜಿಯರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.


Share this with Friends

Related Post