ಮೈಸೂರು, ಮಾ.7: ಮಹಿಳಾ ದಿನಾಚರಣೆ ಎಂದರೆ ನಮಗೆ ನೆನಪಿಗೆ ಬರುವುದು ಪ್ರಾತಃ ಸ್ಮರಣೀಯರಾದ ಮಹಾರಾಣಿ ಕೆಂಪನಂಜಮ್ಮಣ್ಣಿಯವರು ಎಂದು ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಹೇಳಿದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಾಡಿನ ಹೆಮ್ಮೆಯ ಮಹಾರಾಣಿ ಕೆಂಪನಂಜಮಾಣ್ಣಿ ವಾಣಿವಿಲಾಸ ಸನ್ನಿಧಾನ ಅವರ ದಿನಾಚರಣೆಯನ್ನು ಮೈಸೂರಿನ ಅಗ್ರಹಾರ ವೃತ್ತದಲ್ಲಿ ಕರ್ನಾಟಕ ಸೇನಾ ಪಡೆ ವತಿಯಿಂದ ಹಮ್ಮಿಕೊಂಡ ವೇಳೆ ಅವರು ಮಾತನಾಡಿದರು.
ಮೈಸೂರು ಮಹಾರಾಜ ಹತ್ತನೇ ಚಾಮರಾಜ ಒಡೆಯರ್ ರವರ ಧರ್ಮಪತ್ನಿ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ತಾಯಿ ಮಹಾರಾಣಿ ಕೆಂಪನಂಜ ಮಾಣ್ಣಿ ಯವರು ಮೈಸೂರು ಇತಿಹಾಸದಲ್ಲಿ ಮಹತ್ವವಾದ ಸ್ಥಾನವನ್ನು ಪಡೆದಿದ್ದಾರೆ. ಚಿಕ್ಕವಯಸ್ಸಿನಲ್ಲಿ ನಾಲ್ವಡಿ ಅವರಿಗೆ ಅಧಿಕಾರವನ್ನು ವಹಿಸಿಕೊಟ್ಟು, ಅವರಿಗೆ ಮಾರ್ಗದರ್ಶನ ನೀಡಿದ ಭಾರತದ ಅತ್ಯಂತ ಪ್ರಸಿದ್ಧ ಶ್ಲಾಘನೀಯ ಆಡಳಿತಗಾರ್ತಿ.ಅವರ ದಿನಾಚರಣೆಯನ್ನು ರಾಜ್ಯ ಸರ್ಕಾರ – ಜಿಲ್ಲಾಡಳಿತದ ವತಿಯಿಂದ ಆಚರಿಸಬೇಕು ಎಂದು ಅವರು ಆಗ್ರಹಿಸಿದರು.
ಸಮಾಜ ಸೇವಕ ಡಾ. ರಘುರಾಂ ಕೆ ವಾಜಪೇಯಿ ಮಾತನಾಡಿ ಮಹಾರಾಣಿ ಕೆಂಪನಂಜಮ್ಮಣ್ಣಿ ಅವರು ಮಹಿಳಾ ಶಿಕ್ಷಣದಲ್ಲಿ ಅಪಾರ ನಂಬಿಕೆ ಹೊಂದಿದ್ದರು ಮತ್ತು ಅವರ ಆಶ್ರಯದಲ್ಲಿದ್ದ ಮಹಾರಾಣಿ ಕಾಲೇಜು ಎಲ್ಲರ ಗಮನ ಸೆಳೆಯಿತು. ಬ್ರಿಟಿಷರ ರೀಜೆಂಟ್ ಆಗಿ ಕೆಲಸ ಮಾಡಿ ರಾಜ್ಯವನ್ನು ಸಮರ್ಥವಾಗಿ ನಿಭಾಯಿಸಿದರು
ಎಂದು ತಿಳಿಸಿದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಾರಾಣಿ ವಾಣಿವಿಲಾಸ ಸನ್ನಿಧಾನ ದಿನಾಚರಣೆ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಹೇಳಿದರು.
ಅಮ್ಮನವರ ಭಾವಚಿತ್ರಕ್ಕೆ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ.ಜಿ ಗಂಗಾಧರ್ ಪುಷ್ಪ ನಮನ ಸಲ್ಲಿಸಿದರು.
ಈ ವೇಳೆ ಸಾರ್ವಜನಿಕರಿಗೆ ರೈಲ್ವೆ ಇಲಾಖೆ ಹಿರಿಯ ವಿಭಾಗೀಯ ಅಭಿಯಂತರರಾದ ಡಾ. ಎಂ ಎಂ ಬಿ ಮಂಜೇಗೌಡ ಸಿಹಿ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಡಾ. ಪುಷ್ಪಾ ಎಂ ಅಯ್ಯಂಗಾರ್, ಸುರೇಶ್ ಗೋಲ್ಡ್, ಪ್ರಭುಶಂಕರ್, ಕುಮಾರ್ ಗೌಡ, ಅಮರನಾಥ ರಾಜೇ ಅರಸ್, ಅಂಬಾಅರಸ್, ಡಾ.ಮೊಗಣ್ಣಾಚಾರ್, ಲತಾರಂಗನಾಥ, ಶಿವಲಿಂಗಯ್ಯ, ಪ್ರಜೀಶ್ , ಲಕ್ಷ್ಮಿ, ಭಾಗ್ಯಮ್ಮ, ನೇಹಾ, ಪದ್ಮ, ಭಾಗ್ಯ, ಮಂಜುಳಾ, ಹನುಮಂತಯ್ಯ, ರಾಜೇ ಅರಸ್, ರವೀಶ್, ಶ್ರೀನಿವಾಸ್, ದರ್ಶನ್, ಮಹದೇವ್ ಆರ್, ಪ್ರಮೋದ್, ಗಣೇಶ್ ಪ್ರಸಾದ್, ಪ್ರಭಾಕರ್, ಕುಮಾರ್, ವಿಷ್ಣು ಮತ್ತಿತರರು ಉಪಸ್ಥಿತರಿದ್ದರು.