Mon. Dec 23rd, 2024

ಕಾರೊಂದು ನಾಲೆಗೆ ಬಿದ್ದು ಆರು ಮಂದಿ ದುರಂತ ಸಾವು

At least 6 killed as car overturns,
Share this with Friends

ಕಾನ್ಪುರ.ಫೆ.05: ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ಸ್ವಿಫ್ಟ್ ಕಾರೊಂದು ನಾಲೆಗೆ ಬಿದ್ದ ಪರಿಣಾಮ ಕನಿಷ್ಠ ಆರು ಮಂದಿ ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ಕಾನ್ಪುರ ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.

ಕಾರ್ಯಕ್ರಮ ಮುಗಿಸಿ ಹಿಂತಿರುಗುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದು ಪಲ್ಟಿಯಾಗಿದೆ. ಸಿಕಂದರಾ ಪೊಲೀಸ್ ಠಾಣೆ ವ್ಯಾಪ್ತಿಯ ಜಗನ್ನಾಥಪುರ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಬಲಿಯಾದ ಆರು ಮಂದಿಯನ್ನು ದೇರಾಪುರ ಮತ್ತು ಶಿವರಾಜಪುರ ನಿವಾಸಿಗಳು ಎಂದು ಗುರುತಿಸಲಾಗಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿ ಜೆಸಿಬಿ ಸಹಾಯದಿಂದ ಕಾರನ್ನು ಹೊರತೆಗೆದಿದ್ದಾರೆ. ಘಟನೆಯಲ್ಲಿ ಇಬ್ಬರು ಮಕ್ಕಳು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಮೃತರನ್ನು ರಾಜಸ್ಥಾನದ ಶ್ರೀಗಂಗಾನಗರದ ರಾಮದೇವ್ ಕಾಲೋನಿಯ ನಿವಾಸಿ ಬನ್ವಾರಿ ಲಾಲ್ ವರ್ಮಾ, ಅವರ ಪತ್ನಿ ದರ್ಶನಾ, ಅಣ್ಣ ಕೃಷ್ಣಕುಮಾರ್, ಅವರ ಪತ್ನಿ ಗುದ್ದಿದೇವಿ, ಎರಡನೇ ಸಹೋದರ ಓಂಪ್ರಕಾಶ್ ಅವರ ಪತ್ನಿ ಚಂದ್ರಕಲಾ, ಕಾರು ಚಾಲಕ ಎಂದು ಗುರುತಿಸಲಾಗಿದೆ.

ಸಿಕಂದ್ರ-ಶ್ರೀಗಂಧಪುರ ರಸ್ತೆಯ ಜಗನ್ನಾಥಪುರ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ಮಾಹಿತಿಯ ಪ್ರಕಾರ, ಕಾರಿನಲ್ಲಿದ್ದ ಎಲ್ಲರೂ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಹೋಗಿದ್ದರು. ಈ ಜನರು ಇಟಾವಾದ ಫೂಕ್ ಗ್ರಾಮದಿಂದ ತಿಲಕ್ ಸಮಾರಂಭದಿಂದ ಹಿಂದಿರುಗುತ್ತಿದ್ದರು ಕಾರು ನಿಯಂತ್ರಣ ತಪ್ಪಿ ನಾಲೆಗೆ ಬಿದ್ದ ಪರಿಣಾಮ ಸ್ಥಳದಲ್ಲೇ ಅರು ಜನರು ಸಾವನ್ನಪ್ಪಿದ್ದಾರೆ.

ಲಾಲ್ ಕೃಷ್ಣ ಅಡ್ವಾಣಿಗೆ ಭಾರತ ರತ್ನ ಘೋಷಣೆ


Share this with Friends

Related Post