Wed. Dec 25th, 2024

ಸುಧಾ ಮೂರ್ತಿ ರಾಜ್ಯಸಭೆಗೆ ನಾಮನಿರ್ದೇಶನ: ಅಭಿಮಾನಿಗಳ ಸಂಭ್ರಮ

Share this with Friends

ಮೈಸೂರು, ಮಾ.8:‌ ಸುಧಾ ಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಕ್ಕೆ ಮೈಸೂರಿನಲ್ಲಿ ಅಭಿಮಾನಿಗಳು ಸಂಭ್ರಮಿಸಿದರು.

ನಗರದ ಅಗ್ರಹಾರದಲ್ಲಿ ಸುಧಾ ಮೂರ್ತಿ ಅಭಿಮಾನಿಗಳು‌ ‌‌ಸುಧಾ ಮೂರ್ತಿಯವರ ಭಾವಚಿತ್ರ ಹಿಡಿದು ಸಿಹಿ ವಿತರಿಸಿ ಭಾರತ್ ಮಾತಾ ಕಿ ಜೈ, ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಜೈಕಾರ ಕೂಗಿ ಸಂಭ್ರಮಿಸಿದರು

ಈ‌ ವೇಳೆ ಮಾತನಾಡಿದ ಬಿಜೆಪಿ ಮೈಸೂರು ನಗರದ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಣುಕ ರಾಜ್,ಸಮಾಜ ಸೇವೆ, ಶಿಕ್ಷಣ, ಸಾಹಿತ್ಯ ವಲಯದಲ್ಲಿ ಅಪೂರ್ವ ಸೇವೆಗೈದು ದೇಶದ ಜನರ ಮನೆಮಾತಾಗಿರುವ ರಾಜ್ಯದ ಹೆಮ್ಮೆಯ ಸಾಧಕಿ ಶ್ರೀಮತಿ ಸುಧಾಮೂರ್ತಿ ಅವರು ವಿಶ್ವ ಮಹಿಳಾ ದಿನಾಚರಣೆಯ ದಿನದಂದು ರಾಜ್ಯ ಸಭೆಗೆ ನಾಮನಿರ್ದೇಶನಗೊಂಡಿರುವುದು ಕನ್ನಡಿಗರಿಗೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಹೇಳಿದರು.

ತಮ್ಮ ಸಮಾಜ ಸೇವೆಯಿಂದ ಗುರುತಿಸಲ್ಪಡುವ ಸುಧಾ ಅಮ್ಮಾ ಯುವಜನತೆಗೆ ಹಾಗೂ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ ಇಂಥವರನ್ನು ಗುರುತಿಸಿ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವ ರಾಷ್ಟ್ರಪತಿಗಳಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ರವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.

ನಗರಪಾಲಿಕ ಮಾಜಿ ಸದಸ್ಯ ಬಿ ವಿ ಮಂಜುನಾಥ್, ಕೆಆರ್ ಬ್ಯಾಂಕ್ ನಿರ್ದೇಶಕರಾದ ಸರ್ವ ಮಂಗಳ, ನಾಗಶ್ರೀ ಸುಚಿಂದ್ರ, ಕಾವೇರಿ, ಬಿಜೆಪಿಯ ಕಾರ್ಯಕಾರಣಿ ಸದಸ್ಯರಾದ ಶೃತಿ, ಬಿಜೆಪಿ ನಗರ ಕಾರ್ಯದರ್ಶಿ ಎಂ ಆರ್ ಬಾಲಕೃಷ್ಣ, ಓಂ ಶ್ರೀನಿವಾಸ್, ಶ್ರೀನಾಥ್, ಹರೀಶ್, ಚಕ್ರಪಾಣಿ , ಮತ್ತಿತರರು ಹಾಜರಿದ್ದರು.


Share this with Friends

Related Post