Wed. Dec 25th, 2024

ನಾಳೆ ಸಾಂಸ್ಕೃತಿಕ ನಗರಿಗೆ ನಿತಿನ್ ಗಡ್ಕರಿ

Share this with Friends

ಮೈಸೂರು, ಮಾ.9: ಮಾ.10 ರಂದು ಭಾನುವಾರ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸಾಂಸ್ಕೃತಿಕ ನಗರಿಗೆ ಆಗಮಿಸಲಿದ್ದು ಬಿಜೆಪಿ ಕಾರ್ಯಕರ್ತರಲ್ಲಿ ಅತ್ಯುತ್ಸಾಹ‌ ಮನೆ ಮಾಡಿದೆ.

ನಿತಿನ್ ಗಡ್ಕರಿ ಅವರು ಕೇಂದ್ರ ಸರ್ಕಾರದ ಯೋಜನೆಗಳನ್ನು ಲೋಕಾರ್ಪಣೆ ಮಾಡಲಿದ್ದು,ಅದಕ್ಕಾಗಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ವೇದಿಕೆ ಸಿದ್ದವಾಗುತ್ತಿದೆ‌.

ಸಾರ್ವಜನಿಕ ಸಮಾರಂಭದಲ್ಲೂ ಪಾಲ್ಗೊಳ್ಳಲಿದ್ದು,ಕೆ.ಆರ್.ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಅವರು ಸ್ಥಳೀಯ ಬಿಜೆಪಿ ಕಾರ್ಯಕರ್ತರೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.

ಈ ವೇಳೆ 22ನೇ ರಾಷ್ಟ್ರೀಯ ಹೆದ್ದಾರಿ ಶಂಕುಸ್ಥಾಪನ ಕಾರ್ಯಕ್ರಮವನ್ನೂ ಗಡ್ಕರಿ ಅವರು ನೆರವೇರಿಸಲಿದ್ದು, ಟಿ.ಎಸ್. ಶ್ರೀ ವತ್ಸ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿದರು.


Share this with Friends

Related Post