Thu. Dec 26th, 2024

ವಾಸು ಅವರ ನಿಧನಕ್ಕೆ ರಾಮಲಿಂಗಾ ರೆಡ್ಡಿ ಅವರ ತೀವ್ರ ಸಂತಾಪ

Share this with Friends

ಬೆಂಗಳೂರು, ಮಾ.9: ಹಿರಿಯ ಕಾಂಗ್ರೆಸ್ ನಾಯಕರೂ, ಮಾಜಿ ಶಾಸಕರಾದ ವಾಸು ಅವರ ನಿಧನಕ್ಕೆ ಸಾರಿಗೆ ಸಚಿವ ರಾಮಲಿಂಗಾ‌ ರೆಡ್ಡಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕರೂ, ಮೈಸೂರಿನ ಚಾಮರಾಜ ಕ್ಷೇತ್ರದ ಮಾಜಿ ಶಾಸಕರಾದ ವಾಸು ಅವರ ನಿಧನದ ಸುದ್ದಿ ಕೇಳಿ ಬಹಳ ಆಘಾತವಾಯಿತು ಎಂದು ಅವರು ಶೋಕ‌ ಸಂದೇಶದಲ್ಲಿ ಅವರು ತಿಳಿಸಿದ್ದಾರೆ.

ಅವರ ಅಕಾಲಿಕ ನಿಧನ ನಮ್ಮ ಪಕ್ಷಕ್ಕೆ ಹಾಗೂ ನಾಡಿಗೆ ತುಂಬಲಾರದ ನಷ್ಟ,
ವಾಸು ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಹಾಗೂ ಅವರ ಕುಟುಂಬಕ್ಕೆ, ಆತ್ಮೀಯರಿಗೆ, ಬಂಧುಬಳಗಕ್ಕೆ ಈ ನೋವನ್ನು ಭರಿಸುವ ಶಕ್ತಿ ಸಿಗಲಿ ಎಂದು ರಾಮಲಿಂಗಾ ರೆಡ್ಡಿ ಅವರು ಪ್ರಾರ್ಥಿಸಿದ್ದಾರೆ.


Share this with Friends

Related Post