Sat. Jun 6th, 2026

ಕ್ಷೇತ್ರ ಮರುವಿಂಗಡಣೆ ದಕ್ಷಿಣದ ರಾಜ್ಯಗಳ ಹಿತಾಸಕ್ತಿಗೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಬೊಮ್ಮಾಯಿ ಕಿಡಿ

Share this with Friends

ಹಾವೇರಿ: “ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಗತ್ಯ ರಾಜಕಾರಣ ಮಾಡುತ್ತಿದ್ದು, ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ,” ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕ್ಷೇತ್ರ ಮರುವಿಂಗಡಣೆಯ ಬಗ್ಗೆ ಕಾಂಗ್ರೆಸ್ ಹರಡುತ್ತಿರುವ ಗೊಂದಲಗಳನ್ನು ತೀವ್ರವಾಗಿ ಖಂಡಿಸಿದರು.

ಕರ್ನಾಟಕಕ್ಕೆ 14 ಹೆಚ್ಚುವರಿ ಸ್ಥಾನಗಳ ಅವಕಾಶ:

“ಕೇಂದ್ರ ಸರ್ಕಾರ ರೂಪಿಸಿರುವ ಹೊಸ ಮರುವಿಂಗಡಣಾ ಯೋಜನೆಯಡಿ ಕರ್ನಾಟಕಕ್ಕೆ ಹೆಚ್ಚುವರಿಯಾಗಿ 14 ಲೋಕಸಭಾ ಸ್ಥಾನಗಳು ಲಭ್ಯವಾಗಲಿವೆ. ಪ್ರತಿ ರಾಜ್ಯದಲ್ಲಿಯೂ ಸರಾಸರಿ ಶೇ. 50ರಷ್ಟು ಸ್ಥಾನಗಳು ಹೆಚ್ಚಾಗುವ ಉತ್ತಮ ಅವಕಾಶ ನಮ್ಮ ಮುಂದಿದೆ. ಆದರೆ, ಕಾಂಗ್ರೆಸ್ ನಾಯಕರು ಈ ಸತ್ಯವನ್ನು ಮರೆಮಾಚಿ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ದಕ್ಷಿಣ ಭಾರತದ ಹಿತಾಸಕ್ತಿಯನ್ನು ಬಲಿ ಕೊಡುತ್ತಿದ್ದಾರೆ,” ಎಂದು ಅವರು ದೂರಿದರು.

ಮಹಿಳಾ ಮೀಸಲಾತಿ ಕುರಿತು ಪ್ರಶ್ನೆ:

ಮಹಿಳಾ ಮೀಸಲಾತಿ ವಿಧೇಯಕ ಜಾರಿಯ ವಿಳಂಬದ ಬಗ್ಗೆ ಕಾಂಗ್ರೆಸ್ ಟೀಕೆಗೆ ಉತ್ತರಿಸಿದ ಬೊಮ್ಮಾಯಿ, “ಕಾಂಗ್ರೆಸ್ ಕಳೆದ 30 ವರ್ಷಗಳಿಂದ ಮಹಿಳೆಯರಿಗೆ ಅನ್ಯಾಯ ಮಾಡುತ್ತಾ ಬಂದಿದೆ. ದಿವಂಗತ ರಾಜೀವ್ ಗಾಂಧಿ ಅವರ ಕಾಲದಲ್ಲಿ ಸಂಸತ್ತಿನಲ್ಲಿ ಬಹುಮತವಿದ್ದರೂ ಏಕೆ ವಿಧೇಯಕ ಅಂಗೀಕರಿಸಲಿಲ್ಲ? ಪ್ರಧಾನಿ ನರೇಂದ್ರ ಮೋದಿ ಅವರು 2023 ರಲ್ಲಿ ಸರ್ವಾನುಮತದಿಂದ ಈ ವಿಧೇಯಕವನ್ನು ಅಂಗೀಕರಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಕಾಂಗ್ರೆಸ್ ನಾಯಕರು ಮೊದಲು ತಮ್ಮ ವೈಫಲ್ಯಕ್ಕೆ ಉತ್ತರ ನೀಡಲಿ,” ಎಂದು ಸವಾಲು ಹಾಕಿದರು

.

 


Share this with Friends

Related Post