Mon. Dec 23rd, 2024

ತಂಬಾಕು ಉತ್ಪನ್ನಗಳ ತಯಾರಿಕರಿಂದ ಆದಾಯ ಸೋರಿಕೆಕೆ ತಡೆಗೆ ಹೊಸ ನಿಯಮ

tobacco products
Share this with Friends

ನವದೆಹಲಿ, ಫೆ. 5: ಪಾನ್ ಮಸಾಲ, ಗುಟ್ಕಾ ಇತ್ಯಾದಿ ತಂಬಾಕು ಉತ್ಪನ್ನಗಳ ತಯಾರಕರು ತಮ್ಮ ಪ್ಯಾಕಿಂಗ್ ಯಂತ್ರೋಪಕರಣವನ್ನುನೊಂದಾಯಿಸದೇ ಹೋದರೆ ಒಂದು ಲಕ್ಷ ರೂ ದಂಡ ಕಟ್ಟಬೇಕಾಗುತ್ತದೆ. ಪಾನ್ ಮಸಾಲಾ, ಗುಟ್ಕಾ ಮತ್ತು ತಂಬಾಕು ಉತ್ಪನ್ನಗಳ ತಯಾರಕರು ತಮ್ಮ ಪ್ಯಾಕಿಂಗ್ ಯಂತ್ರೋಪಕರಣಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಧಿಕಾರಿಗಳಲ್ಲಿ ನೋಂದಾಯಿಸಬೇಕು. ಇಲ್ಲದಿದ್ದರೇ 1 ಲಕ್ಷ ರೂಪಾಯಿಗಳವರೆಗೆ ದಂಡವನ್ನು ಪಾವತಿಸಬೇಕಾಗುತ್ತದೆ.

ಏಪ್ರಿಲ್ 1 ರಿಂದ ಜಾರಿಗೆ ಈ ನಿಯಮ ಜಾರಿಗೆ ಬರುತ್ತಿದ್ದು, ತಂಬಾಕು ಉದ್ಯಮದಲ್ಲಿ ಆದಾಯ ನಷ್ಟವನ್ನು ತಡೆಗಟ್ಟಲು, ಹಣಕಾಸು ಮಸೂದೆ, 2024 ರಲ್ಲಿ ಕೇಂದ್ರ ಜಿಎಸ್‌ಟಿ ಕಾಯ್ದೆಗೆ ತಿದ್ದುಪಡಿಗಳನ್ನು ಮಾಡಲಾಗಿದೆ. ಜಿಎಸ್‌ಟಿ ಅಧಿಕಾರಿಗಳಲ್ಲಿ ನೊಂದಣಿ ಮಾಡಿಸದೆ ಇದ್ದಲ್ಲಿ ಪ್ರತಿ ನೋಂದಣಿಯಾಗದ ಯಂತ್ರಕ್ಕೆ 1 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು.

ಪಾನ್ ಮಸಾಲ ಮತ್ತು ಗುಟ್ಕಾ ವ್ಯವಹಾರದಲ್ಲಿ ತೆರಿಗೆ ಕಳ್ಳತನ ಆಗುತ್ತಿರುವುದು ಬೆಳಕಿಗೆ ಬಂದಿತ್ತು. ಈ ತೆರಿಗೆ ಆದಾಯ ಸೋರಿಕೆ ಆಗುವುದನ್ನು ತಡೆಯಲು ರಾಜ್ಯ ಹಣಕಾಸು ಸಚಿವರನ್ನೊಳಗೊಂಡ ಸಮಿತಿ ವರದಿ ಮಂಡಿಸಿತ್ತು. ಕಳೆದ ವರ್ಷ (2023) ಫೆಬ್ರುವರಿಯಲ್ಲಿ ನಡೆದ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಈ ವರದಿಗೆ ಅನುಮೋದನೆ ಕೊಡಲಾಯಿತು. ಯಂತ್ರೋಪಕರಣಗಳನ್ನು ಜಿಎಸ್​ಟಿ ಪ್ರಾಧಿಕಾರದಲ್ಲಿ ನೊಂದಾಯಿಸುವುದನ್ನು ಕಡ್ಡಾಯಗೊಳಿಸಬೇಕೆಂಬ ಸಲಹೆ ಆ ವರದಿಯಲ್ಲಿ ತಿಳಿಸಲಾಗಿತ್ತು.

ರಾಮಮಂದಿರದ ಬಗ್ಗೆ “ಪಕ್ಷಪಾತ” ವರದಿ ಮಾಡಿದ ಬಿಬಿಸಿಗೆ ಬ್ರಿಟಿಷ್ ಸಂಸತ್ತಿನಲ್ಲಿ ತರಾಟೆ

ಆದರೂ ಕೂಡ ಬಹಳಷ್ಟು ಗುಟ್ಕಾ ಕಂಪನಿಗಳು ಈ ನಿಯಮ ಪಾಲಿಸುತ್ತಿಲ್ಲ ಎಂಬುದು ಗೊತ್ತಾಯಿತು. ಹೀಗಾಗಿ, ಹಣಕಾಸು ಮಸೂದೆ ಮೂಲಕ ಕಾನೂನಿನಲ್ಲಿ ತಿದ್ದುಪಡಿ ತಂದು, ನೊಂದಣಿಯಾದ ಪ್ರತಿಯೊಂದು ಯಂತ್ರೋಪಕರಣಕ್ಕೂ ಒಂದು ಲಕ್ಷ ರೂ ದಂಡ ಹಾಕುವ ಕ್ರಮ ಘೋಷಿಸಲಾಗಿದೆ. ಮಾರ್ಚ್ 31ರವರೆಗೂ ಇದಕ್ಕೆ ಕಾಲಾವಕಾಶ ಇದೆ.


Share this with Friends

Related Post