Sun. Apr 20th, 2025

ಈಶ್ವರಪ್ಪ ಪುತ್ರನಿಗೆ ಟಿಕೆಟ್ ಕೊಡಿಸಲು ಶಕ್ತಿಮೀರಿ ಪ್ರಯತ್ನಿಸುವೆ:ಯಡಿಯೂರಪ್ಪ

Share this with Friends

ಶಿವಮೊಗ್ಗ,ಮಾ.10: ಲೋಕಸಭಾ ಚುನಾವಣೆಗೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಪುತ್ರನಿಗೆ ಟಿಕೆಟ್ ಕೊಡಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದು ಮಾಜಿ ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಈಶ್ವರಪ್ಪ ಪುತ್ರ ಕಾಂತೇಶ್‍ ಅವರು ನನ್ನ ಜೊತೆ ಬಂದರೆ ದೆಹಲಿಗೆ ಕರೆದುಕೊಂಡು ಹೋಗ್ತೇನೆ ಈಗಲೂ ಕಾಲ ಮಿಂಚಿಲ್ಲ ಎಂದು ಹೇಳಿದರು.

ಅಮಿತ್ ಶಾ ಜೊತೆ ಮಾತಾನಾಡಿಸುತ್ತೇನೆ, ಸೀಟ್ ಕೊಡಿಸಲು ನನ್ನಿಂದ ಆಗುವ ಎಲ್ಲಾ ಪ್ರಯತ್ನ ಮಾಡ್ತೇನೆ ಎಂದು ಹೇಳಿದರು.

ಈಶ್ವರಪ್ಪ ಬಂದರೆ ಜೊತೆಗೆ ಕರೆದುಕೊಂಡು ಮಾತನಾಡಬಹುದು, ಬನ್ನಿ ಈಶ್ವರಪ್ಪನವರೇ ದೆಹಲಿಗೆ ಹೋಗೋಣ, ಅಮಿತ್ ಶಾ ಅವರನ್ನು ಮೀಟ್ ಮಾಡಿಸುತ್ತೇನೆ. ನಾನು ನಿಮ್ಮ ಜೊತೆ ಇರುತ್ತೇನೆ ಅಮಿತ್ ಶಾ ಹತ್ತಿರ ಕೂಡಾ ಮಾತಾನಾಡಿಸುತ್ತೇನೆ ಎಂದು ಯಡಿಯೂರಪ್ಪ ಮನವಿ ಮಾಡಿದರು.


Share this with Friends

Related Post