Wed. Dec 25th, 2024

ಮಾ.13.ಬೇಬಿ ಬೆಟ್ಟದಲ್ಲಿ ದನಗಳ ಜಾತ್ರೆ:ಚಾಲೆಂಜಿಂಗ್ ಸ್ಟಾರ್ ಭಾಗಿ

Share this with Friends

ಮೇಲುಕೋಟೆ,ಮಾ.11: ಇದೇ ಬುಧವಾರ(13)
ಬೇಬಿ ಬೆಟ್ಟದಲ್ಲಿ ಭಾರೀ ದನಗಳ ಜಾತ್ರಾ ಮಹೋತ್ಸವ ನಡೆಯಲಿದೆ.

ದನಗಳ ಜಾತ್ರಾ ಮಹೋತ್ಸವ
ಪ್ರಯುಕ್ತ ಉಚಿತ ಸಾಮೂಹಿಕ ಸರಳ ವಿವಾಹ ಮಹೋತ್ಸವ ಕೂಡಾ ಹಮ್ಮಿಕೊಳ್ಳಲಾಗಿದೆ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ತಿಳಿಸಿದ್ದಾರೆ.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಕನ್ನಡದ ಖ್ಯಾತ ಚಿತ್ರ ನಟ,ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಮತ್ತು ಇತರ ಚಲನಚಿತ್ರ ನಟರು ಆಗಮಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸಾರ್ವಜನಿಕರು ಸಾಮೂಹಿಕ ಸರಳ ವಿವಾಹದಲ್ಲಿ ಭಾಗವಹಿಸಿ ನೂತನ ವಧು ವರರಿಗೆ ಶುಭ ಕೋರಿ, ಸರಳ ವಿವಾಹವನ್ನು ಪ್ರೋತ್ಸಾಹಿಸಬೇಕೆಂದು ದರ್ಶನ್ ಪುಟ್ಟಣ್ಣಯ್ಯ ವಿನಂತಿಸಿದ್ದಾರೆ.


Share this with Friends

Related Post