Wed. Dec 25th, 2024

ಕೆ.ಆರ್‌‌ ಕ್ಷೇತ್ರದಲ್ಲಿ ನೂತನ ಬಸ್ ತಂಗುದಾಣಗಳ ಲೋಕಾರ್ಪಣೆ

Share this with Friends

ಮೈಸೂರು, ಮಾ.11:ಮೈಸೂರಿನ ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವೆಡೆ ನೂತನ ಬಸ್ ತಂಗುದಾಣಗಳನ್ನು ಕ್ಷೇತ್ರದ ಶಾಸಕ ಟಿ ಎಸ್ ಶ್ರೀವತ್ಸ ಲೋಕಾರ್ಪಣೆ ಮಾಡಿದರು.

ಕೃಷ್ಣರಾಜ ಕ್ಷೇತ್ರದಲ್ಲಿ ಸುಮಾರು ಒಂದು ಕೋಟಿ ಇಪ್ಪತ್ತು ಲಕ್ಷ ರೂ ವೆಚ್ಚದಲ್ಲಿ 10 ಬಸ್ ತಂಗುದಾಣ ಗಳನ್ನು ನಿರ್ಮಿಸಿ ಬಿಸಿಲ ಬೇಗೆಯಲ್ಲಿ ಬಳಲಿದ್ದ ಜನತೆಗೆ ಅನುಕೂಲ ಮಾಡಿಕೊಟ್ಟರು.

ಮೊದಲು ಜೆ.ಎಲ್.ಬಿ.ರಸ್ತೆ, ಸಿದ್ದಪ್ಪ ವೃತ್ತ,ಹಾರ್ಡಿಂಗ್ ವೃತ್ತ,ಶಾಂತಿ ಸಾಗರ್ ಮುಂತಾದ ಕಡೆ ಸಾಂಪ್ರದಾಯಿಕವಾಗಿ ಉದ್ಘಾಟಿಸಲಾಯಿತು.

ಈ ವೇಳೆ ಮಾತನಾಡಿದ ಶ್ರೀವತ್ಸ ಅವರು, ತಂಗುದಾಣ ಗಳನ್ನು ಸಾರ್ವಜನಿಕರು,ಪ್ರಯಾಣಿಕರು ಸದುಪಯೋ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

,ಬಸ್ಸು ತಂಗುದಾಣ ದ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು, ಇದಕ್ಕೆ ಸಮರ್ಪಕವಾಗಿ ವಿದ್ಯುತ್ ಸಂಪರ್ಕ ಇರಬೇಕು ಎಂದು ತಿಳಿಸಿದರು.

ಸಾರ್ವಜನಿಕ ರಿಗೆ ಕಿರಿ ಕಿರಿ ಉಂಟುಮಾಡುವ ಬಿತ್ತಿ ಪತ್ರ ಅಂಟಿಸುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಬಸ್ ತಂಗುದಾಣದಲ್ಲಿ ಸಾರಿಗೆ ಇಲಾಖೆ ವತಿಯಿಂದ ದಿನನಿತ್ಯ ಓಡಾಡುವ ಬಸ್ಸುಗಳ ವೇಳಾಪಟ್ಟಿಯನ್ನು ಅಳವಡಿಸಬೇಕು,ಹಾಗೂ ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಇದರ ನಿರ್ವಹಣೆ ಸರಿಯಾಗಿ ನಡೆಯಬೇಕು ಎಂದು ಅಧಿಕಾರಿಗಳಿಗೆ ಶ್ರೀವತ್ಸ ಸೂಚಿಸಿದರು.

ಮಾಜಿ ಮೇಯರ್ ಶಿವಕುಮಾರ್,ನಗರ ಪಾಲಿಕೆ ಮಾಜಿ ಸದಸ್ಯರಾದ ಸೌಮ್ಯ ಉಮೇಶ್, ರಮೇಶ್, ಹಾಗೂ ಜೋಗಿ ಮಂಜು, ಉಮೇಶ್,ರಾಕೇಶ್ ಗೌಡ, ಜೋಗಪ್ಪ, ಕೃಷ್ಣನಾಯಕ, ಶರತ್ ಭಂಡಾರಿ, ಕಿಶೋರ್, ವಿಜಯ್ ನಾಯಕ್, ನಂದೀಶ್ ನಾಯಕ್, ಅರುಣ್, ಪ್ರದೀಪ್, ಜಯರಾಮ್, ಅನ್ನಪೂರ್ಣಮ್ಮ, ಕೀರ್ತಿ, ಲಿಕೀತ್ ಗೌಡ,ಮಂಜುನಾಥ್ ಮತ್ತಿತರರು ಹಾಜರಿದ್ದರು.


Share this with Friends

Related Post