Wed. Dec 25th, 2024

ಮಾಜಿ ಮೇಯರ್ ವಾಸು ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

Share this with Friends

ಮೈಸೂರು, ಮಾ.11:‌ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ವತಿಯಿಂದ ಮಾಜಿ ಶಾಸಕ ವಾಸು ಅವರಿಗೆ ಭಾವಪೂರ್ಣ ಶೃದ್ದಾಂಜಲಿ ಸಲ್ಲಿಸಲಾಯಿತು.

ದಿವಂಗತ ವಾಸು ಅವರ ಶೃದ್ದಾಂಜಲಿ ಸಭೆಯನ್ನು ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಆಯೋಜಿಸಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಈ ವೇಳೆ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ. ಜಿ ಗಂಗಾಧರ್ ಮಾತನಾಡಿ, ವಾಸು ಅವರು ನಮ್ಮ ಸಮುದಾಯದ ಮುಂಚೂಣಿ ನಾಯಕರು, ಶಿಸ್ತಿನ ಸಿಪಾಯಿ, ನಾಡು ಕಂಡಂತಹ ಸರಳ ಸಜ್ಜನಿಕೆಯ ರಾಜಕಾರಣಿಯಾಗಿದ್ದರು ಎಂದು ಸ್ಮರಿಸಿದರು.

ಮೈಸೂರು ಮೇಯರ್ ಆಗಿ, ಚಾಮರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿ ಹಲವು ಉತ್ತಮ ಕೆಲಸ ಮಾಡುವ ಮೂಲಕ ಮೈಸೂರಿನ ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕೆ ಆರ್ ಎಸ್ ರಸ್ತೆಯಲ್ಲಿ ನೂತನವಾಗಿ ಆರಂಭಿಸಿರುವ ಜಯದೇವ ಹೃದ್ರೋಗ ಆಸ್ಪತ್ರೆ ಪ್ರಾರಂಭವಾಗಲು ಅವರ ಅದ್ಭುತವಾದ ಕೊಡುಗೆ ಇದೆ, ಪಡುವಾರಹಳ್ಳಿಯಲ್ಲಿರುವ ನೂತನ ಮಹಾರಾಣಿ ಕಾಲೇಜು ಸಹ ಇವರ ಹೋರಾಟದ ಫಲವಾಗಿದೆ.

ತಮ್ಮ ವಿದ್ಯಾ ವಿಕಾಸ್ ಶಿಕ್ಷಣ ಸಂಸ್ಥೆಯ ಮೂಲಕ ಸಹಸ್ರಾರು ಮಂದಿಗೆ ಉದ್ಯೋಗವನ್ನು ನೀಡಿದ್ದಾರೆ. ರಾಜಕೀಯ ಕ್ಷೇತ್ರದ ಅಜಾತಶತ್ರು ಆಗಿದ್ದ ಅವರು ಎಲ್ಲರನಯ ಪ್ರೀತಿಯಿಂದ ನೋಡುತ್ತಿದ್ದರು,ಅವರು ನನ್ನ ರಾಜಕೀಯ ಗುರುಗಳು ಎಂದು ಹೇಳಿದರು.

ಶೃದ್ದಾಂಜಲಿ ಸಭೆಯಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ತೇಜಸ್ ಲೋಕೇಶ್ ಗೌಡ, ಮಹಿಳಾ ಅಧ್ಯಕ್ಷೆ ಲತಾ ರಂಗನಾಥ್, ಜಗದೀಶ್, ಶಿವಲಿಂಗಯ್ಯ, ಚರಣ್ ರಾಜ್, ದೀಪಕ್ ಗೌಡ, ಮಹಾದೇವ ಆರ್ , ಮಂಜುಳಾ, ಪದ್ಮ , ಹೇಮ, ಗಾಯತ್ರಿ, ಪ್ರತಿಮ , ಮಾಯ, ಲಕ್ಷ್ಮೀ , ಪುಷ್ಪಾ, ಶಿಲ್ಪ , ಹನುಮಂತಯ್ಯ, ಚಂದ್ರಶೇಖರ, ದರ್ಶನ್ ಗೌಡ ಮತ್ತಿತರರು ಪಾಲ್ಗೊಂಡಿದ್ದರು.


Share this with Friends

Related Post