Fri. Nov 1st, 2024

ಯದುವೀರ್ ಒಡೆಯರ್ ಅವರಿಗೆ ಟಿಕೆಟ್ ಕೊಟ್ರೆ ಕಾರ್ಯಕರ್ತನಂತೆ ಕೆಲಸ ಮಾಡಿ ಗೆಲ್ಲಿಸುತ್ತೇನೆ : ಪ್ರತಾಪ್ ಸಿಂಹ

Pratap Simha
Share this with Friends

ಮೈಸೂರು: ಬಿಜೆಪಿ ಹೈಕಮಾಂಡ್ ನನಗೇ ಟಿಕೆಟ್ ನೀಡುತ್ತದೆ ಎಂಬ ನಂಬಿಕೆ ಇದೆ. ಒಂದು ವೇಳೆ ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿರುವಂತೆ ನನ್ನ ಬದಲು ರಾಜವಂಶಸ್ಥ ಯದುವೀರ್ ಒಡೆಯರ್ ಅವರಿಗೆ ಟಿಕೆಟ್ ನೀಡುವುದು ನಿಜವಾದಲ್ಲಿ ಅವರ ಪರವಾಗಿ ಕೆಲಸ ಮಾಡುವೆ,
ಸಾಮಾನ್ಯ ಕಾರ್ಯಕರ್ತನ ರೀತಿ ಕರಪತ್ರ ಹಂಚಿ ಗೆಲ್ಲಿಸಿಕೊಂಡು ಬರ್ತೇನೆ” ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ನಗರದಲ್ಲಿ ಮಂಗಳವಾರ ಬೆಳಗ್ಗೆ ಸುದ್ದಿಗಾರರ ಪ್ರಶ್ವೆಗಳಿಗೆ ಉತ್ತರಿಸಿದ ಅವರು, ನನಗೆ ಟಿಕೆಟ್ ಕೈತಪ್ಪಲು ಕಾರಣ ಕೊಡಿ. ನಾನು ಯಾವುದರಲ್ಲಿ ಕಡಿಮೆ ಇದ್ದೇನೆ ಹೇಳಿ ಎಂದು ಪ್ರಶ್ನಿಸಿದರು.

ಸೋಮವಾರ ರಾತ್ರಿ 10 ಗಂಟೆಗೆ ಫೇಸ್ ಬುಕ್ ಲೈವ್ ಬಂದಿದ್ದ ತಾನು ಮಾಡಿದ್ದ 10 ವರ್ಷಗಳ ಸಾಧನೆಯ ಬಗ್ಗೆ ಮಾತನಾಡಿದ್ದರು. ಜೊತೆಗೆ ತನ್ನ ಜೊತೆಗೆ ನಿಂತ ಕ್ಷೇತ್ರದ ಜನರು, ಬೆಂಬಲಿಗರಿಗೆ ಧನ್ಯವಾದಗಳನ್ನು ಸಮರ್ಪಿಸಿದ್ದರು. ತನಗೆ ಟಿಕೆಟ್ ತಪ್ಪಿಸಲು ನಡೆಯುತ್ತಿರುವ ರಾಜಕೀಯದ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದರು. ಆದರೂ ಅಂತಿಮವಾಗಿ ಪಕ್ಷ ತನ್ನ ಕೆಲಸವನ್ನು ನೋಡಿ ಟಿಕೆಟ್ ಕೊಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಇದು ಒಂದು ರೀತಿಯಲ್ಲಿ ವಿದಾಯ ಭಾಷಣದಂತೆ ಗೋಚರಿಸಿತ್ತು. ಅದಾಗಲೇ ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಆಗುವ ಸಾಧ್ಯತೆ ಬಗೆಗಿನ ಚರ್ಚಗೆ ಮತ್ತಷ್ಟು ಇಂಬು ನೀಡಿದಂತಾಗಿತ್ತು.

ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರು ತಕ್ಷಣವೇ ನಿನ್ನನ್ನು ಭೇಟಿ ಸಂದೇಶ ಕಳಿಸಿದ್ದರು . ಇದೀಗ ಚುನಾವಣಾ ನಿರ್ವಹಣಾ ಸಮಿತಿಯ ಸಭೆ ನಡೆಯುತ್ತಿದೆ. ಇದೀಗ ಮಧ್ಯಾಹ್ನ ಮೇಲೆ ಬೆಂಗಳೂರಿಗೆ ತೆರಳಿ ಅವರನ್ನು ಭೇಟಿ ಮಾಡುವೆ ಎಂದು ಮಾಹಿತಿ ನೀಡಿದರು.ಸಿದ್ದರಾಮಯ್ಯ ಅವರನ್ನು ಎದುರು ಹಾಕಿಕೊಂಡು ರಾಜಕಾರಣ ಮಾಡಿದ್ದೇನೆ. ಅವರು ಮೋದಿಯನ್ನು ಟೀಕಿಸಿದಾಗ ದಕ್ಷಿಣ ಕರ್ನಾಟಕದಲ್ಲಿ ತೀವ್ರವಾಗಿ ಖಂಡಿಸಿದವನು ಪ್ರತಾಪ್ ಸಿಂಹ ಮಾತ್ರ. ಹಾಗಿದ್ದರೆ ಇದು ನನ್ನ ದೌರ್ಬಲ್ಯವೇ? ಎಂದು ಭಾವುಕರಾಗಿ ಪ್ರಶ್ನಿಸಿದರು. ಕಳೆದ 10 ವರ್ಷದಲ್ಲಿ ಕಾರ್ಯ ಸಂಸದರೂ ಮಾಡಲು ಸಾಧ್ಯವಿಲ್ಲದಷ್ಟು ಅಭಿವೃದ್ಧಿ ಕಾರ್ಯವನ್ನು ಮಾಡಿದ್ದೀನಲ್ಲವೇ? ಇದು ನನ್ನ ದೌರ್ಬಲ್ಯವೇ? ಇನ್ನೇನು ಬೇಕು ಜನರಿಗೆ? ಎಂದು ಪುಂಖಾನುಪುಂಖವಾಗಿ ಪ್ರಶ್ನೆಗಳ ಬಾಣಗಳನ್ನು ಎಸೆದರು.


Share this with Friends

Related Post